ದಾವಣಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತೋತ್ಸವದ ಪರಾಕ್ರಮ ದಿವಸ ವನ್ನು ನಗರದ ನೂತನ ಕಾಲೇಜ್ ಆವರಣದಲ್ಲಿ ಆಚರಿಸಲಾಯಿತು. ನೂತನ್ ಪಿಯು ಕಾಲೇಜು ,ಪುಷ್ಪ ಮಹಾಲಿಂಗಪ್ಪ ಪಿಯು ಕಾಲೇಜು, ಶ್ರೀ ಸಿದ್ದೇಶ್ವರ ಪಿಯು ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ನೂತನ್ ಕಾಲೇಜಿನ ಪ್ರಾಂಶುಪಾಲ ಸುಮಿತ್ರಾ ಕೆ.ಟಿ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಎಬಿವಿಪಿ ದಾವಣಗೆರೆ ನಗರದ ಅಧ್ಯಕ್ಷ ಪವನ್ ರೇವಣ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಭಾಷಣಕಾರರಾದ ನಿತಿನ್ ಕುಮಾರ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜೀವನ ಚರಿತ್ರೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯ ಶರತ್, ಹೋರಾಟ ಪ್ರಮುಖ ವಿಜಯ್, ನಗರ ಕಾರ್ಯಕಾರಿಣಿ ಸದಸ್ಯ ಕೋಟ್ರೇಶ್ A.M, ಅಭಿಷೇಕ್, ಎಬಿವಿಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಆಕಾಶ್ ಇಟಗಿ, ಚರಣ್ ಮತ್ತು ಸುಮನ್,ನರೇಂದ್ರ,ರಾಜು, ಹಾಗೂ ನಗರ ಕಾರ್ಯಕರ್ತರು ಉಪಸ್ಥಿತರಿದ್ದರು.



