ಶಿವಮೊಗ್ಗ; ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಬಡಾವಣೆಯ ಪುತ್ತಿಗೆ ಮಠದ ಸಮೀಪ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದಲ್ಲಿ ದಾವಣಗೆರೆ ಮೂಲದ ಇಬ್ಬರು ಕಾರ್ಮಿಕರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಜಿಲ್ಲೆಯ ಬೀರಪ್ಪ (30) ಮ೦ಜಪ್ಪ (45) ಕೊಲೆಯಾದ ದುರ್ದೈವಿಗಳಾಗುದ್ದಾರೆ. ಈ ಘಟನೆ ನಡೆದಿರುವ ಸಮುದಾಯ ಭವನಕ್ಕೆ ಗ್ರಾನೈಟ್ ಅಳವಡಿಸಲು ಬಂದವರಾಗಿದ್ದಾರೆ. ಈ ತಂಡದಲ್ಲಿ ಐದು ಮಂದಿ ಕಾರ್ಮಿಕರಿದ್ದು, ಇವರಲ್ಲಿ ಒಬ್ಬಾತ ರಾಜಣ್ಣ (60)
ತಾನೇ ಇಬ್ಬರನ್ನೂ ಪಿಕಾಸಿಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಬುಧವಾರ ರಾತ್ರಿ ಬೀರಪ್ಪ ಮತ್ತುಮ೦ಜಪ್ಪ ಕುಡಿದ ಮತ್ತಿನಲ್ಲಿ ಅಡುಗೆ ಮಾಡಿ ಹಾಕುವಂತೆ ನನಗೆ ಹಿಂಸೆ ನೀಡಿದ್ದರು. ಇದೇ ಕಾರಣಕ್ಕೆ ಅವರಿಬ್ಬರೂ ನಿದ್ದೆ ಮಾಡಿದ್ದ ವೇಳೆ ಪಿಕಾಸಿಯಿಂದ ಅವರ ತಲೆಗೆ ಹೊಡೆದು ಸಾಯಿಸಿದ್ದೇನೆ ಎಂದು ರಾಜಣ್ಣ ಹೇಳಿ
ಕೊಂಡಿದ್ದಾನೆ ಎನ್ನಲಾಗಿದೆ. ಒಂದು ಶವ ಕಟ್ಟಡದ ಒಳಗಡೆ ಇದ್ದು, ಇನ್ನೊಂದು ಶವ ಕಟ್ಟಡದ ತಾರಸಿ ಮೇಲೆ ಬಿದ್ದಿದೆ. ಮುಂದಿನ ವಾರ ಈ ಸಮುದಾಯ ಭವನವನ್ನು ಉದ್ಘಾಟನೆ ಮಾಡಲು ಸಿದ್ಧತೆಯೂ
ನಡೆದಿತ್ತು. ಪ್ರಕರಣದಲ್ಲಿ ರಾಜಣ್ಣ
ಸೇರಿ ಉಳಿದ ಮೂವರ ವಶಕ್ಕೆ ತೆಗೆದುಕೊಂಡಿದ್ದಾರೆ.