ದಾವಣಗೆರೆ: ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ ವತಿಯಿಂದ ಹರಿಹರದಲ್ಲಿ ಸೆಪ್ಟೆಂಬರ್ 26 ರಿಂದ 28 ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರದ ಒಂಭತ್ತು ವರ್ಷಗಳ ಸಾಧನೆಗಳ ಛಾಯಾಚಿತ್ರ ಪ್ರದರ್ಶನ ಮತ್ತು ಪೋಷಣ್ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು.
ಕೃಷಿ ಸಿಂಚಯಿ ಯೋಜನೆ, ಸಾಯಿಲ್ ಹೆಲ್ತ್ ಕಾರ್ಡ್, ಕಿಸಾನ್ ಸಮ್ಮಾನ್, ನೀಮ್ ಕೋಟೆಡ್ ಯೂರಿಯಾ, ಮೇರಿ ಮಾಠಿ ಮೇರಾ ದೇಶ್, ಏಕ ಭಾರತ ಶ್ರೇಷ್ಠ ಭಾರತ, ಆಯುಷ್ಮಾನ್ ಭಾರತ್, ಒಂದು ರಾಷ್ಟ್ರ ಒಂದು ಮಾರುಕಟ್ಟೆ, ಒಂದು ತೆರಿಗೆ, ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ ನೀಡುವ ಪಿಎಂ ಪ್ರಣಾಮ್ ಯೋಜನೆಗಳು ಗಮನ ಸೆಳೆದವು.
ವಿಶೇಷವಾಗಿ ಪೋಷಣ್ ಮಾಸಾಚರಣೆ ಅಂಗವಾಗಿ ಪೋಷಕಾಂಶ ಆಹಾರ ಪದಾರ್ಥಗಳ ಪ್ರದರ್ಶನ ನಡೆಯಿತು. ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಯಡಿ ಆರು ಸಾವಿರ ರೂಪಾಯಿ ಸೌಲಭ್ಯ ಪಡೆದ ನೂರಕ್ಕೂ ಅಧಿಕ ತಾಯಂದಿರು ಭಾಗವಹಿಸಿದ್ದರು.ಹರಿಹರ ಶಾಸಕ ಬಿ.ಪಿಹರೀಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ, ಅಧ್ಯಕ್ಷರಾದ ನಿಂಬಕ್ಕ ನಿಂಗಪ್ಪ ಚಂದಾಪುರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೂರ್ಣಿಮಾ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಅಕ್ಷತಾ ಸಿ.ಹೆಚ್, ಲಕ್ಷ್ಮೀಕಾಂತ ಉಪಸ್ಥಿತರಿದ್ದರು.



