ದಾವಣಗೆರೆ: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ದಾವಣಗೆರೆ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನರು ನಗರ ಪ್ರದೇಶಕ್ಕೆ ಅನವಶ್ಯಕವಾಗಿ ಬರಬೇಡಿ. ಅವಶ್ಯಕತೆ ಇದ್ದರಷ್ಟೇ ಬನ್ನಿ. ಎಲ್ಲರು ಸರ್ಕಾರಿ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಿ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಎಲ್ಲರು ಸಾಮಾಜಿಕ ಅಂತರ, ಮಾಸ್ಕ್, ಸಾನಿಟೈಸರ್ ಬಳಸುವ ಮೂಲಕ ಸೋಂಕಿನಿಂದ ದೂರ ಇರಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೊನಾ ಲಸಿಕೆಯನ್ನು ನೀಡುತ್ತಿದ್ದು, ಈಗಾಗಲೇ ಸಾಕಷ್ಟು ಜನರು ಲಸಿಕೆ ತಗೆದುಕೊಂಡಿದ್ದಾರೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಲಭ್ಯವಾಗಲಿದ್ದು, ಯುವ ಸಮೂಹ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ವೆಟಿಲೇಟರ್ ಸಿಗದೇ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದಾವಣಗೆರೆ ಜನತೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ಅನವಶ್ಯಕವಾಗಿನಗರಕ್ಕೆ ಬರಬೇಡಿ, ಅವಶ್ಯಕತೆ ಇದ್ದರಷ್ಟೇ ಬರಬೇಕು. ಪ್ರತಿಯೊಬ್ಬರು ಮಾಸ್ಕ್ , ಸಾಮಾಜಿಕ ಅಂತರ, ಸಾನಿಟೈಸರ್ ಬಳಬೇಕು. ಈ ಮೂಲಕ ಸರ್ಕಾರ ಸೂಚನೆಯನ್ನು ತಪ್ಪದೇ ಪಾಲನೆ ಮಾಡಿ ಕೊರೊನಾದಿಂದ ಜೀವ ಉಳಿಸಿಕೊಳ್ಳಬೇಕಿದೆ. ಜೀವ ಇದ್ದರೆ, ಏನು ಬೇಕಾದರೂ ಸಾಧನೆ ಮಾಡುಬಹುದು. ಹೀಗಾಗಿ ಎಲ್ಲ ನಿಯಮ ಪಾಲಿಸಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.



