ದಾವಣಗೆರೆ: ಎಲ್ಲಡೆ ಮೋದಿ, ಬಿಜೆಪಿ ಪರ ವಾತಾವರಣ ಇದೆ. 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ವಾತಾವರಣ ಚೆನ್ನಾಗಿ ಇದೆ. ಶಿವಮೊಗ್ಗದಲ್ಲಿ ಕಾರ್ಯಕರ್ತರೆಲ್ಲರೂ ರಣೋತ್ಸಾಹದಲ್ಲಿದ್ದಾರೆ. ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರಗೆ ಸರಿಸಾಟಿ ಯಾರು ಇಲ್ಲ. ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿ ಲೀಡ್ ಹೆಚ್ಚಾಗಿದೆ. ಕನಿಷ್ಠ 2 ಲಕ್ಷಗಳ ಮತಗಳ ಅಂತರದಿಂದ ಗೆಲುವು ಎಂದುಕೊಂಡಿದ್ದೇ, ಈಗ ರಾಘವೇಂದ್ರ ಅವರು 4 ಲಕ್ಷ ಮತಗಳ ಅಂತರದಿಂದ ಗೆದ್ದೇ ಗೆಲ್ತಾರೆ. ಹಲವು ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ಕನಸು ಕಾಣ್ತಾ ಇದೆ. ಆದರೆ, ನಾವು 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ ಎಂದು
ಕಾಂಗ್ರೆಸ್ ಪಕ್ಷದವರು ಹೇಗಾದ್ರೂ ಮತದಾರರ ಮನಸ್ಸು ಗೆಲ್ಲಬೇಕು ಅಂತ ಪ್ರಯತ್ನ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಎಷ್ಟೇ ಪ್ರಯತ್ನಪಟ್ಟರು ವಾತಾವರಣ ಬಿಜೆಪಿ ಹಾಗೂ ಜೆಡಿಎಸ್ ಪರ ಇದೆ. ಮತದಾರರು ನರೇಂದ್ರ ಮೋದಿ ಪರ ಇರಬೇಕು ಅಂತ ಗಟ್ಟಿಯಾದ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮ ನಿರೀಕ್ಷೆ ಮೀರಿ ಬಿಜೆಪಿ ಪರ ವಾತಾವರಣ ಇದೆ.
ದಾವಣಗೆರೆಯಲ್ಲಿ ಚುನಾವಣೆ ಘೋಷಣೆ ಮುನ್ನ ಬಹಳ ಗೊಂದಲ ಇತ್ತು. ಇದೀಗ ಅದೆಲ್ಲವು ಮರೆತು ಒಗ್ಗಟ್ಟಾಗಿ ಕೆಲಸ ಮಾಡ್ತಾ ಇದ್ದಾರೆ. ದಾವಣಗೆರೆಯಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಇದೇ ತಿಂಗಳು 28ಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದರು.