ದಾವಣಗೆರೆ: ಬಿಜೆಪಿ ಭದ್ರ ಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭರ್ಜರಿ ಜಯ ದಾಕಲಿಸಿದ್ದು, ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ಗೆ ಹೀನಾಯ ಸೋಲಾಗಿದೆ.
ದಾವಣಗೆರೆಯಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಬಿಜೆಪಿಗೆ ಈ ಬಾರಿ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ದಾವಣಗೆರೆ ಲೋಕಸಭೆ ಕ್ಷೇತ್ರದ ಇತಿಹಾಸದಲ್ಲಿ ಸಂಸತ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ದಾಖಲೆಯನ್ಬು ಪ್ರಭಾ ಮಲ್ಲಿಕಾರ್ಜುನ್ ಬರೆದಿದ್ದಾರೆ.
ಬಿಜೆಪಿಯಿಂದ ಜಿ. ಎಂ. ಸಿದ್ದೇಶ್ವರ್ ಸತತ ನಾಲ್ಕು ಬಾರಿ ಸಂಸತ್ ಪ್ರವೇಶಿಸಿದ್ದರು. ಈ ಬಾರಿ ಗಾಯತ್ರಿ ಸಿದ್ದೇಶ್ವರ್ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್ .ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಸತತ ಸೋಲಿನ ಬಳಿಕ ಈ ಬಾರಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಮೂಲಕ ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂಬುದನ್ನು ಛಿದ್ರಗೊಳಿಸಿದ್ದಾರೆ. ಪ್ರಭಾ ಮಲ್ಲಿಕಾರ್ಜನ್ 42,474 ಮತಗಳ ಅಂತರರದಲ್ಲಿ ಗೆಲುವು ದಾಖಲಿಸಿದ್ದಾರೆ.
ಮೊದಲ ಮೂರು ಸುತ್ತಿನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಮುನ್ನಡೆ ಯಲ್ಲಿದ್ದರು. ಆದರೆ, 4ನೇ ಸುತ್ತಿನಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಮುನ್ನಡೆ ಸಾಧಿಸಿದ್ದರು. 5ನೇ ಸುತ್ತಿನಲ್ಲಿ ಮತ್ತೆ ಪ್ರಭಾ ಮಲ್ಲಿಕಾರ್ಜುನ್ 3112 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. 6ನೇ ಸುತ್ತಿನಲ್ಲಿ 11,139 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.
7ನೇ ಸುತ್ತಿನಲ್ಲಿ ಪ್ರಭಾ ಮಲ್ಲಿಕಾರ್ಜುನ್ 24,910 ಮತಗಳ ಮುನ್ನಡೆ ಅಂತರ ಹೆಚ್ಚಿಸಿಕೊಂಡಿದ್ದಾರೆ. 8 ನೇ ಸುತ್ತು 29,046 ಮತ, 9ನೇ ಸುತ್ತು 40 ಸಾವಿರ,10 ನೇ ಸುತ್ತು 46 ಸಾವಿರ, 11 ನೇ ಸುತ್ತು 40 ಸಾವಿರ ಹಾಗೂ 12 ಸುತ್ತಿನಲ್ಲಿ 42,683 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.13 ನೇ ರೌಂಡ್ ಮುಕ್ತಾಯಕ್ಕೆ 38900 ಮತಗಳಿಂದ ಮುನ್ನಡೆ.14 ನೇ ರೌಂಡ್ ನಲ್ಲಿ 33369, 15ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಕಂಡಿದ್ದು, 37 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಕೊನೆಯಲ್ಲಿ 42,474 ಮತಗಳ ಅಂತರರದಲ್ಲಿ ಗೆಲುವು ದಾಖಲಿಸಿದ್ದಾರೆ.