ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ ಭಾರೀ ಮುನ್ನಡೆ ಸಾಧಿಸಿದ್ದು, ಸುತ್ತಿನಿಂದ ಸುತ್ತಿಗೆ ಮತಗಳ ಅಂತರ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಗೆ ಭಾರೀ ಹಿನ್ನಡೆಯಾಗಿದೆ. 12ನೇ ಸುತ್ತಿನ ಮತ ಏಣಿಕೆ ಮುಕ್ತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜನ್ 42,683 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಮೂರು ಸುತ್ತಿನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಮುನ್ನಡೆ ಯಲ್ಲಿದ್ದರು. ಆದರೆ, 4ನೇ ಸುತ್ತಿನಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಮುನ್ನಡೆ ಸಾಧಿಸಿದ್ದರು. 5ನೇ ಸುತ್ತಿನಲ್ಲಿ ಮತ್ತೆ ಪ್ರಭಾ ಮಲ್ಲಿಕಾರ್ಜುನ್ 3112 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. 6ನೇ ಸುತ್ತಿನಲ್ಲಿ 11,139 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.
7ನೇ ಸುತ್ತಿನಲ್ಲಿ ಪ್ರಭಾ ಮಲ್ಲಿಕಾರ್ಜುನ್ 24,910 ಮತಗಳ ಮುನ್ನಡೆ ಅಂತರ ಹೆಚ್ಚಿಸಿಕೊಂಡಿದ್ದಾರೆ. 8 ನೇ ಸುತ್ತು 29,046 ಮತ, 9ನೇ ಸುತ್ತು 40 ಸಾವಿರ,10 ನೇ ಸುತ್ತು 46 ಸಾವಿರ, 11 ನೇ ಸುತ್ತು 40 ಸಾವಿರ ಹಾಗೂ 12 ಸುತ್ತಿನಲ್ಲಿ 42,683 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.