ದಾವಣಗೆರೆ: ದಾವಣಗೆರೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ವಿಫಲವಾಗಿವೆ. ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ನನ್ನ ಗೆಲುವು ನಿಶ್ಚಿತ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿದ ಬಳಿಕ ಜನರು ಪಕ್ಷೇತರ ನಿಲ್ಲಬೇಕೆಂದು ಜನರು ಒತ್ತಾಯ ಮಾಡಿದ್ದರು. ಜನರ ಅಪೇಕ್ಷೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಎಷ್ಟೇ ಒತ್ತಡ ಬಂದರೂ ಕಣದಿಂದ ಹಿಂದೆ ಸರಿಯಲ್ಲ. ಕನಿಷ್ಠ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು
ಎರಡನೇ ನಾಮಪತ್ರವನ್ನು ಅಪಾರ ಬೆಂಬಲಿಗರೊಂದಿಗೆ, ಕ್ಷೇತ್ರದ ಜನತೆಯ ಅಪೇಕ್ಷೆ ಮೇರೆಗೆ ಸಲ್ಲಿಸಿದ್ದೇನೆ. ಇಲ್ಲಿ ನೆರದ ಜನ ನೋಡಿದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನನಗೆ ಗೆಲುವು ಖಚಿತ .ನಾನು ಯಾರನ್ನು ಸೋಲಿಸಲು ಬಂದಿಲ್ಲ, ಗೆಲ್ಲಲು ಬಂದಿದ್ದೇನೆ. ಕಾಂಗ್ರೆಸ್ , ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಸ್ಪರ್ಧೆಯಿಂದ ಭಯ ಶುರುವಾಗಿದೆ.
ದಾವಣಗೆರೆ ಜನತೆ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದ್ದೇನೆ.ಈಗಿನ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಕಾಂಗ್ರೆಸ್ ಸಹ ಇದಕ್ಕೆ ಹೊರತಲ್ಲ. ಅಭಿವೃದ್ಧಿ ವಿಚಾರದಲ್ಲಿ ಎರಡೂ ಪಕ್ಷಗಳು ವಿಫಲವಾಗಿವೆ. ಜಿಲ್ಲೆಯಲ್ಲಿಉಳ್ಳವರು ಬೆಳೆಯುತ್ತಿದ್ದಾರೆ. ಬಡವರು ರಾಜಕೀಯದಲ್ಲಿ ಬೆಳೆದಿಲ್ಲ. ಇನ್ನೂ ಚಿಹ್ನೆ ಸಿಕ್ಕಿಲ್ಲ. ಚಿಹ್ನೆ ಯಾವುದೇ ಸಿಕ್ಕರೂ ಗೆಲ್ಲುವ ವಿಶ್ವಾಸವಿದೆ ಎಂದರು.