ದಾವಣಗೆರೆ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ( ಮೇ 6) ನಡೆದಿದ್ದು ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ , ಸಂಸದ ಜಿ.ಎಂ.ಸಿದ್ದೇಶ್ವರ ಮತದಾನದ ಗೌಪ್ಯತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ದಾವಣಗೆರೆ ಸಂಸದ ಸಿದ್ದೇಶ್ವರ್ ಮತದಾನದ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದೆ. ಬಿಜೆಪಿ ಅಭ್ಯರ್ಥಿ, ಪತ್ನಿ ಗಾಯತ್ರಿ ಸಿದ್ದೇಶ್ವರ್ ಮತವನ್ನು ಹಾಕುವ ವೇಳೆ ಪಕ್ಕದಲ್ಲಿ ನಿಂತಿದ್ದು ಜಿ.ಎಂ.ಸಿದ್ದೇಶ್ವರ್‌ರಿಂದ ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತದಾನಕ್ಕೆ ಮತಗಟ್ಟೆಗೆ ದಂಪತಿ ಸಮೇತರಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಆಗಮಿಸಿದ್ದರು. ಈ ವೇಳೆ ಗಾಯತ್ರಿ ಸಿದ್ದೇಶ್ವರ್ ಮತ ಹಾಕಲು ಗೊಂದಲ್ಲಕೊಳ್ಳಗಾಗಿದ್ದರು. ಪತ್ನಿಗಗೆ ಮಾಡಿದರು. ತನ್ನ ಮತ ತಾನೇ ಹಾಕಿಕೊಳ್ಳದ ಬಿಜೆಪಿ ಅಭ್ಯರ್ಥಿ ಆಡಳಿತ ಹೇಗೆ ನಡೆಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕಿಡಿಕಾರಿದ್ದರು.
ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ತಮ್ಮ ಪತ್ನಿ ಗೃಹಲಕ್ಷ್ಮೀ, ಗೃಹಜ್ಯೋತಿ ಮುಂತಾದ ಗ್ಯಾರಂಟಿ ಯೋಜನೆಗಳಿಂದ ಪ್ರಭಾವಿತಗೊಂದು ಕಾಂಗ್ರೆಸ್ ಗೆ ಮತ ಹಾಕಬಹುದು ಎಂಬ ಅನುಮಾನವಿತ್ತೇ!? ಎಂದು ಕಾಂಗ್ರೆಸ್ ಪಕ್ಷ ಎಕ್ಸ್ ನಲ್ಲಿ ಕಿಡಿಕಾರಿದೆ
ಮತದಾನದಲ್ಲಿ ಯಾವುದೇ ವ್ಯಕ್ತಿ ಗೌಪ್ಯತೆ ಕಾಪಾಡಿಕೊಳ್ಳುವುದು ಅವರ ಹಕ್ಕು ಹಾಗೂ ಮತದಾನದ ಗೌಪ್ಯತೆಗೆ ಯಾರೂ ಕೂಡ ಧಕ್ಕೆ ತರಬಾರದು.ಆದರೆ, ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಅವರ ಪತಿ ಹಾಗೂ ಸಂಸದ ಜಿ.ಎಂ ಸಿದ್ದೇಶ್ವರ್ ಅವರು ಮತದಾನದ ಗೌಪ್ಯತೆಯ ನಿಯಮ ಉಲ್ಲಂಘಿಸಿ ಗಾಯತ್ರಿ ಸಿದ್ದೇಶ್ವರ್ ಅವರು ಮತದಾನ ಮಾಡುವ ವೇಳೆ ಇವಿಎಂ ಬಳಿ ಇದ್ದಾರೆ. ಕೂಡಲೇ ಈ ಬಗ್ಗೆ ಚುನಾವಣೆ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ತಮ್ಮ ಪತ್ನಿ ಗೃಹಲಕ್ಷ್ಮೀ, ಗೃಹಜ್ಯೋತಿ ಮುಂತಾದ ಗ್ಯಾರಂಟಿ ಯೋಜನೆಗಳಿಂದ ಪ್ರಭಾವಿತಗೊಂದು ಕಾಂಗ್ರೆಸ್ ಗೆ ಮತ ಹಾಕಬಹುದು ಎಂಬ ಅನುಮಾನವಿತ್ತೇ!?
ಮತದಾನದಲ್ಲಿ ಯಾವುದೇ ವ್ಯಕ್ತಿ ಗೌಪ್ಯತೆ ಕಾಪಾಡಿಕೊಳ್ಳುವುದು ಅವರ ಹಕ್ಕು ಹಾಗೂ ಮತದಾನದ ಗೌಪ್ಯತೆಗೆ ಯಾರೂ ಕೂಡ ಧಕ್ಕೆ ತರಬಾರದು.
ಆದರೆ
ದಾವಣಗೆರೆಯ ಬಿಜೆಪಿ… pic.twitter.com/lgTpAnEavl— Karnataka Congress (@INCKarnataka) May 7, 2024