ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅವರಿಗೆ ಬಿಟ್ಟಿದ್ದು. ಮೊನ್ನೆ ನಾವು ಗೆದ್ದಿವಲ್ಲ ಹುಮ್ಮಸ್ಸು ಇದೆ. ಹೀಗಾಗಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಲೋಕಸಭೆ ಟಿಕೆಟ್ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ನನ್ನ ಸೊಸೆ ಸ್ಪರ್ಧೆ ಬಗ್ಗೆ ಅವರ ಯಜಮಾನರು ಹೇಳುತ್ತಾರೆ. ಮನೆಯಲ್ಲಿ ಟಿಕೆಟ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.



