ದಾವಣಗೆರೆ: ರಾಜ್ಯದ ವಿಧಾನ ಪರಿಷತ್‍ನ 6 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಜೂನ್ 3 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಣದಲ್ಲಿರುವ ಅಭ್ಯರ್ಥಿಗಳ ವಿವರ; ಡಾ.ವೈ.ಎ ನಾರಾಯಣಸ್ವಾಮಿ, ಭಾರತೀಯ ಜನತಾ ಪಾರ್ಟಿ, ಡಿ.ಟಿ.ಶ್ರೀನಿವಾಸ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಕಿಶೆನ್.ಎಂ.ಜಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷೇತರರಾಗಿ ಡಾ.ಜಿ.ಹೆಚ್.ಇಮ್ರಾಪೂರ, ಕಪನಿಗೌಡ, ಎನ್.ಈ ನಟರಾಜ, ವೈ.ಆರ್.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣಸ್ವಾಮಿ, ಬಾಬು ಯೋಗೀಶ್.ಆರ್, ಲೋಕೇಶ್ ತಾಳಿಕಟ್ಟೆ, ವನಿತಾ.ಎಸ್, ವಿನೋದ್ ಶಿವರಾಜ್, ಶ್ರೀನಿವಾಸ.ಬಿ, ಸೈಯದ್ ಆಫಾಖ್ ಅಹಮದ್ ಚುನಾವಣಾ ಕಣದಲ್ಲಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರ; .ಎಸ್.ಎಲ್.ಭೋಜೆಗೌಡ, ಜನತಾದಳ, ಡಾ.ಕೆ.ಕೆ ಮಂಜುನಾಥ್ ಕುಮಾರ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಪಕ್ಷೇತರರಾಗಿ ಡಾ.ಅರುಣ್ ಹೊಸಕೊಪ್ಪ, ಡಾ.ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಭಾಸ್ಕರಶೆಟ್ಟಿ.ಟಿ, ಕೆ.ಕೆ.ಮಂಜುನಾಥ್ ಕುಮಾರ್, ಪಕ್ಷೇತರ, ಡಾ.ಎಸ್.ಆರ್.ಹರೀಶ್ ಆಚಾರ್ಯ ಚುನಾವಣಾ ಕಣದಲ್ಲಿದ್ದಾರೆ.
ನೈರುತ್ಯ ಪದವೀಧರರ ಕ್ಷೇತ್ರ; ಆಯನೂರು ಮಂಜುನಾಥ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಡಾ.ಧನಂಜಯ ಸರ್ಜಿ, ಭಾರತೀಯ ಜನತಾ ಪಾರ್ಟಿ, ಜಿ.ಸಿ.ಪಾಟೀಲ್, ಸರ್ವ ಜನತಾ ಪಾರ್ಟಿ, ಪಕ್ಷೇತರರಾಗಿ ದಿನಕರ ಉಳ್ಳಾಲ್, ಎಸ್.ಪಿ.ದಿನೇಶ್, ಬಿ.ಮಹಮ್ಮದ್ ತುಂಬೆ, ಕೆ.ರಘುಪತಿ ಭಟ್, ಡಾ.ಶೇಕ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ ಇವರು ಚುನಾವಣಾ ಕಣದಲ್ಲಿದ್ದಾರೆ.