ದಾವಣಗೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಮುಕ್ತ, ಶಾಂತಿಯುತ ನಿಷ್ಪಕ್ಷಪಾವಾಗಿ ಚುನಾವಣೆ ನಡೆಸಲು ನಡೆಯಬೇಕೆಂಬ ಉದ್ದೇಶದಿಂದ ಮತದಾನ ನಡೆಯುವ ದಿನಗಳಂದು ಜಿಲ್ಲೆಯಾದ್ಯಂತ ಶುಷ್ಕದಿವಸವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ.ಎಂ.ವಿ ಆದೇಶಿಸಿದ್ದಾರೆ.
ದಾವಣಗೆರೆ ಜಿಲ್ಲಾದ್ಯಂತ ಜೂ.1ರ ಸಂಜೆ 4 ಗಂಟೆಯಿಂದ ಜೂನ್ 3 ರ ಸಂಜೆ 6 ಗಂಟೆಯವರೆಗೆ ಎಲ್ಲಾ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಹೊಟೇಲ್, ಕ್ಲಬ್, ಡಾಬ, ಛತ್ರ ಇನ್ನಿತರೆ ಸ್ಥಳಗಳಲ್ಲಿ ಮದ್ಯಮಾರಾಟ ಮತ್ತು ಸರಬರಾಜು ಹಾಗೂ ಮದ್ಯಪಾನವನ್ನು ನಿಷೇಧಿಸಲಾಗಿರುತ್ತದೆ.



