ದಾವಣಗೆರೆ: ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಚಾರಿತ್ರ್ಯತೆ ಕಾಪಾಡಿಕೊಂಡು ಬರುವವರು, ಉತ್ತಮ ನಾಯಕರಾಗುತ್ತಾರೆ. ಉತ್ತಮ ಚಾರಿತ್ರ್ಯ ಹೊಂದಿದ ಶಾಸಕ ಎಸ್. ಎ. ರವೀಂದ್ರನಾಥ್ ಆದರ್ಶಪ್ರಾಯರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಸಚಿವರಾದ ಎಸ್ ಎ ರವೀಂದ್ರನಾಥ್ ಅವರ ಅಮೃತ ಮಹೋತ್ಸವ ಅಭಿನಂದನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದದರು. ನನ್ನ ತಂದೆ ಕಾಲದಲ್ಲಿ ದಾವಣಗೆರೆ, ಮಾಯಕೊಂಡ ಸೇರಿದಂತೆ ಸುತ್ತಮುತ್ತಲಿನ ರೈತರೊಂದಿಗೆ ಭದ್ರಾ ಕಾಲುವೆ ನೀರು ಹರಿಸಲು ಹೋರಾಟ ಮಾಡಿ, ರವೀಂದ್ರನಾಥ್ ಯಶಸ್ವಿಯಾದವರು. ಯಾವುದೇ ಹೋರಾಟ ಕೈಗೆತ್ತುಕೊಂಡರೆ ಅದಕ್ಕೆ ಅಂತಿಮ ರೂಪ ಕೊಡುವ ಸಂಕಲ್ಪ ಹೊಂದಿದವರು ಎಂದರು.
ರವೀಂದ್ರನಾಥ್ ಹಿರಿಯರು ಉತ್ತಮ ಮಾರ್ಗದರ್ಶಕರು.ಸಾರ್ವಜನಿಕ ಜೀವನದಲ್ಲಿ ಸ್ವಚಾರಿತ್ರ್ಯ ಪ್ರಾಮಾಣಿಕ ಮೌಲ್ಯ ಎತ್ತಿ ಹಿಡಿದವರು. ಅವರು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯರು. ತಮ್ಮ ಮಾತಿನಿಂದಲೇ ಚಾಟಿ ಬೀಸುವ, ಸತ್ಯವನ್ನು ಬಹಳ ಅರ್ಥಗರ್ಭಿತವಾಗಿ ಹೇಳುವ ಕಲೆ ಅವರಿಗಿದೆ.
ರಾಜಕಾರಣದಲ್ಲಿದ್ದರು ಅಧಿಕಾರಕ್ಕೆ ಎಂದು ಹಪಹಪಿಸಲಿಲ್ಲ ಎಂದರು.
ಗುಣದಲ್ಲಿ ಸರಳತೆ.ಗೊಂದಲವಿಲ್ಲದ ರಾಜಕಾರಣಿ. ಹೀಗಾಗಿಯೇ ಕ್ಕೆ ದಾವಣಗೆರೆ ಜಿಲ್ಲೆಯ ಜನ ಅವರಿಗೆ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ. ಸಮನ್ವಯತೆ, ಉತ್ತಮ ಆಚರಣೆ ಮತ್ತು ಚಾರಿತ್ರ್ಯ ಈ ಮೂರು ಎಸ್ ಎ ಆರ್ ಬಳಿ ಇದೆ. ವ್ಯಾಪಾರದಲ್ಲಿ ಲಾಭ, ನಷ್ಟ ಇದೆ. ಧರ್ಮದಲ್ಲಿ ಪಾಪ, ಪುಣ್ಯ ಇದೆ. ಈ ಎರಡೂ ಅಳವಡಿಸಿಕೊಂಡವರು ಶ್ರೀಮಂತರಾಗಿ ಬದುಕು ಬಾಳಿದವರು ರವೀಂದ್ರನಾಥ್. ಅವರು ಶತಮಾನ ಪೂರೈಸಲಿ ನಮಗೆಲ್ಲ ಮಾರ್ಗದರ್ಶನ ನೀಡಲಿ ಎಂದರು.
ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ಮೊನಚು ಮಾತು ನೇರತನ ಎಸ್ ಎ ಆರ್ ಅವರದು ಮುಂದಿನ ಚುನಾವಣೆಯಲ್ಲಿ ಅವರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರಾಗಬೇಕು. ಪಕ್ಷದಲ್ಲಿ ಹಿರಿಯರಿಗೆ ಅವಕಾಶ ಇಲ್ಲ ಎನ್ನುತ್ತಾರೆ ಆದರೆ ಗೆಲ್ಲುವ ವ್ಯಕ್ತಿ ಎಸ್ ಎ ಆರ್ ಅವರಿಗೆ ಟಿಕೇಟ್ ನೀಡಿದರೆ ಬಿಜೆಪಿ ಗೆಲುವು ಪಡೆಯಲಿದೆ.ದಾವಣಗೆರೆ ಬಿಜೆಪಿ ಭದ್ರಕೊಟೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಎಸ್ ಎ ಆರ್ ಕಾರಣಿಕರ್ತರು. ಅವರ ಸರಳಜೀವನ ನಮಗೆಲ್ಲಾ ಮಾದರಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ,ಮೇಯರ್ ಎಸ್.ಟಿ ವಿರೇಶ್,ಎಂ.ಬಿ ಬಾನುಪ್ರಕಾಶ್ ಶಾಸಕರುಗಳಾದ ಎಂ.ಪಿ ರೇಣುಕಾಚಾರ್ಯ,ಮಾಡಾಳು ವಿರೂಪಾಕ್ಷಪ್ಪ,ಎಸ್.ವಿ ರಾಮಚಂದ್ರಪ್ಪ, ಕರುಣಾಕರರೆಡ್ಡಿ, ಪ್ರೊ.ಲಿಂಗಣ್ಣ, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್,ಡಾ.ಎ.ಹೆಚ್ ಶಿವಯೋಗಿಸ್ವಾಮಿ,ಬಿ.ಪಿ ಹರೀಶ್ , ಸುಧಾ ಜಯರುದ್ರೇಶ್,ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ,ಬಿ.ಎಸ್ ಜಗದೀಶ್ ಮತ್ತಿತರರಿದ್ದರು. ಎಸ್.ಎ ರವೀಂದ್ರನಾಥ್ ಹಾಗೂ ಶ್ರೀಮತಿ ರತ್ನಮ್ಮ ದಂಪತಿಗೆ ಅಭಿನಂದನೆಸಲ್ಲಿಸಿದರು.



