ದಾವಣಗೆರೆ: RSSಗೂ ಕುರುಬ ಎಸ್ ಟಿ ಮೀಸಲಾತಿ ಹೋರಾಟಕ್ಕೂ ಏನು ಸಂಬಂಧ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮಾಜವನ್ನ ಎಸ್ ಟಿಗೆ ಸೇಸಿಸುವ ಹೋರಾಟಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬರಲ್ಲ ಅಂದ್ರೆ ನಾವೇನು ಮಾಡುವುದು. ಎಸ್ ಟಿ ಹೋರಾಟಕ್ಕೂ ಆರ್ ಎಸ್ ಎಸ್ ಏನು ಸಂಬಂಧ ಇಲ್ಲ. ನಾವು ಮಾಡುವ ಪ್ರಯತ್ನ ಮಾಡುತ್ತೇವೆ . ಕುರುಬ ಸಮಾಜ ಎಸ್ ಟಿಗೆ ಸೇರುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟವಿಚಾರ ಎಂದರು.



