ದಾವಣಗೆರೆ: ಫೆ.24 ರಂದು ನಡೆಯಲಿರುವ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದಿಲ್ಲ ಎಂಬ ಹತಾಶೆಯಿಂದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ ಎಂದು ಮೇಯರ್ ಬಿ.ಜಿ.ಅಜಯಕುಮಾರ್ ಹೇಳಿದರು.
ಬಿಜೆಪಿ ಅನಧಿಕೃತವಾಗಿ ಆರ್.ಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಅವರ ಹೆಸರು ಸೇರಿಸಿದೆ ಎಂದಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ದೇಶದ ಯಾವುದೇ ಪ್ರಜೆ ಯಾವ ಊರಲ್ಲೂ ಬೇಕಾದರೂ ಮನೆ ಮಾಡಿಕೊಂಡು ಬದುಕಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಇದನ್ನು ಮೊದಲು ಕಾಂಗ್ರೆಸ್ ನಾಯತಕರು ಅರಿಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್.ಶಂಕರ್, ಚಿದಾನಂದಗೌಡ ಅವರದು ದಾವಣಗೆರೆಯಲ್ಲಿ ಮನೆ ಇರುವ ಕಾರಣಕ್ಕೆ ಇಲ್ಲಿಯ ಮತದಾರರ ಪಟ್ಟಿಯಲ್ಲಿ ಹೆಸರಿದೆ. ಚುನಾವಣಾ ಶಾಖೆಯ ಅಧಿಕಾರಿಗಳು ಅವರ ಹೆಸರು ಸೇರಿಸಿದ್ದಾರೆಯೇ, ಇದರಲ್ಲಿ ಬಿಜೆಪಿ ತಯಾರಿಸಿದ ಪಟ್ಟಿಯಲ್ಲ. ಹೀಗಾಗಿ ಬಿಜೆಪಿಯ ವಿರುದ್ಧ ಅನಗತ್ಯ ಆರೋಪ ಮಾಡಿ, ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.
ಕೆ.ಪ್ರಸನ್ನಕುಮಾರ್ ಮಾತನಾಡಿ, ಸಚಿವ ಶಂಕರ್ ಅವರ ಮನ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಮನೆ ಮಾಡಿದ್ದಾರೆ. ಅವರು ಪಾಲಿಕೆ ಮೇಯರ್ ಚುನಾವಣೆಗಾಗಿ ಮನೆ ಮಾಡಿಕೊಂಡಿಲ್ಲ ಎಂದರು.
ಎಸ್.ಟಿ.ವೀರೇಶ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲವೂ ಅಧಿಕೃತವಾಗಿಯೇ ನಡೆದಿದೆ ಎಂದರು. ಈ ಸಂದರ್ಭದಲ್ಲಿ ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಪಾಲಿಕೆ ಸದಸ್ಯರಾದ ಗೌರಮ್ಮ ಗಿರೀಶ್, ಗಿರಿಜಾ ಬಾಯಿ, ರೇಣುಕಾ, ಸೋಗಿ ಶಾಂತಕುಮಾರ್ ಮತ್ತಿತರರು ಹಾಜರಿದ್ದರು.



