ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದ ಎಂಸಿಸಿ ಬಿ ಬ್ಲಾಕ್ ನ ಸ್ನೇಹ ಮಹಿಳಾ ಬಳಗದ ವತಿಯಿಂದ ಕೆ.ಆರ್. ಮಾರುಕಟ್ಟೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಗಲಿರುಳೆನ್ನದೆ ಶ್ರಮ ಪಡುತ್ತಿರುವ ಸಂದರ್ಭದಲ್ಲಿ ನಾವು ಸಹ ಜಾಗೃತಿ ಮೂಡಿಸುವ ವಹಿಸಿ, ಅವರ ಕಾರ್ಯಕ್ಕೆ ಜೊತೆಗೂಡಬೇಕು ಎಂದು ಮನವಿ ಮಾಡಿದರು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಅನವಶ್ಯಕವಾಗಿ ಓಡಾಡಬೇಡಿ ಎಂದು ಸಾರ್ವಜನಿಕರಲ್ಲಿ ತಿಳಿಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸ್ನೇಹ ಮಹಿಳಾ ಬಳಗದ ಮಂಜುಳಾ ಬಸಲಿಂಗಪ್ಪ, ಶೋಭಾ ರವಿ, ತುಳಸಿ ಡಾ ಮಹೇಶ್ವರಪ್ಪ, ಶ್ರೀಮತಿ ಗಾಯತ್ರಿ ಬಳಿಗಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.



