ದಾವಣಗೆರೆ: ರೈತರು, ಮಠ, ಮಂದಿರಗಳಿಗೆ ವಕ್ಫ್ ನೋಟಿಸ್ ಕೊಡುವ ಮೂಲಕ ಶಾಂತವಾಗಿದ್ದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಒಂದಿಂಚೂ ಜಾಗವನ್ನೂ ವಕ್ಫ್ ಬೋರ್ಡ್ ಗೆ ಬಿಟ್ಟುಕೊಡವ ಮಾತಿಲ್ಲ. ವಕ್ಫ್ ಕಾಯ್ದೆ ರದ್ದಾಗುವವರೆಗೂ ದೇಶಾದ್ಯಂತ ಹೋರಾಟ ಮಾಡುತ್ತೇವೆ ಎಂದು ಶಾಸಕ ಬಿ. ಪಿ. ಹರೀಶ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತೆ ಹಿಂದೂಗಳ ಮೇಲೆ ನಿರಂತರ ಅನ್ಯಾಯ ನಡೆಯುತ್ತಿದೆ. ಮುಂಬರುವ ದಿನಗಗಳಲ್ಲಿ ಹಿಂದೂಗಳು ಎಚ್ಚರಿಕೆಯಿಂದ ಇರಬೇಕು. ವಕ್ಫ್ ವಿಚಾರದಲ್ಲಿ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಅನ್ಯಾಯ ಎಸಗಿದ್ದಾರೆ. ವಕ್ಪ್ ಕಾಯ್ದೆ ರದ್ದು ಮಾಡಬೇಕು ಈ ವಿವಾದಕ್ಕೆ ಕಾರಣರಾದ ವಕ್ಫ್ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಪಿಜೆ ಬಡಾವಣೆಯ ನಾಲ್ಕುವರೆ ಎಕರೆ ವಕ್ಫ್ ಆಸ್ತಿ ಎಂದು ದಾಖಲೆಯಲ್ಲಿ ಬಂದಿದೆ. ಇದು ರಾಜ್ಯ ಅಷ್ಟೇ ಅಲ್ಲ ದೇಶದ ಸಮಸ್ಯೆ. ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಧರಣಿ ಸತ್ಯಾಗ್ರಹ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ದಾವಣಗೆರೆಯಲ್ಲಿಯೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು



