ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 18 ನೇ ವಾರ್ಡ್ ನ ಸದಸ್ಯ ಸೋಗಿ ಆರ್ . ಶಾಂತಕುಮಾರ್, ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 10ನೇ ವಾರ್ಡ್ ನ ರಾಕೇಶ್ ಜಾದವ್ , ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 45ನೇ ವಾರ್ಡ್ ಉದಯ ಕುಮಾರ್ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ 34ನೇ ವಾರ್ಡ್ ನ ಮಂಜನಾಯ್ಕ ಆಯ್ಕೆಯಾಗಿದ್ದಾರೆ.



