ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕ್ರಿಮಿಕೀಟಗಳು, ಹಾವು ಮುಂತಾದವು ಹೆಚ್ಚಾಗಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರು ಬಂದಿವೆ. ಹೀಗಾಗಿ ಒಂದು ವಾರದಲ್ಲಿ ಖಾಲಿ ನಿವೇಶನ ಸ್ವಚ್ಚಗೊಳಿಸದಿದ್ದರೆ ದಂಡ ವಿಧಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.
ಖಾಲಿ ನಿವೇಶನಗಳ ಮಾಲೀಕರೆಲ್ಲರೂ ತಮ್ಮ ತಮ್ಮ ನಿವೇಶನಗಳಲ್ಲಿ ಒಂದು ವಾರದೊಳಗಾಗಿ ಗಿಡಗಂಟಿಗಳನ್ನು ತೆಗೆಸಿ ಸ್ವಚ್ಚ ಮಾಡಿಕೊಳ್ಳಬೇಕು. ಒಂದು ವೇಳೆ ತಪ್ಪಿದಲ್ಲಿ ಮಹಾನಗರಪಾಲಿಕೆ ವತಿಯಿಂದ ಸ್ವಚ್ಚಗೊಳಿಸಿ, ಪ್ರತಿ ಚ.ಅಡಿಗೆ ರೂ.10/- ರಂತೆ ಶುಲ್ಕ ವಿಧಿಸಿ ನಿವೇಶನದ ಕಂದಾಯದೊಂದಿಗೆ ಸೇರಿಸಿ ವಸೂಲಿ ಮಾಡಲಾಗುವುದೆಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



