ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ , ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಸರ್ಕಾರ ಅಧಿಕೃತ ಗೆಜೆಟ್ ನಲ್ಲಿ ಅಧಿಕೃತವಾಗಿ ಪ್ರಕರಟಿಸಿದೆ. ಮೇಯರ್ ಸ್ಥಾನ ಎಸ್ ಸಿ ಮಹಿಳೆ, ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಇದೇ ತಿಂಗಳು 24 ರಂದು ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದ್ದು, ಸರ್ಕಾರದ ಗೆಜೆಟ್ ಹೊರಡಿಸಿದೆ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಟ್ಟು 45 ವಾರ್ಡ್ ಗಳಿವೆ. ಇದರಲ್ಲಿ ಕಾಂಗ್ರೆಸ್ 22, ಬಿಜೆಪಿ 17 , ಪಕ್ಷೇತರರು 05, ಜೆಡಿಎಸ್ 01 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ನಿಂದ ಒಬ್ಬ ಅಭ್ಯರ್ಥಿ ರಾಜೀನಾಮೆ ನೀಡಿದ್ದಾರೆ. ಪಕ್ಷೇತರಲ್ಲಿ ನಾಲ್ಕು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇನ್ನು ಒಬ್ಬ ಪಕ್ಷೇತರ ಕಾಂಗ್ರೆಸ್ ಬೆಂಬಲ ನೀಡಿದ್ದಾರೆ. ಮೇಯರ್ ಚುನಾವಣೆಯಲ್ಲಿ ಮತದಾನಕ್ಕೆ ಪಾಲಿಕೆ ಸದಸ್ಯರು, ಸಂಸದರ, ಎಂಎಲ್ ಎ ಹಾಗೂ ಎಂಎಲ್ಸಿ ಸೇರಿ ಒಟ್ಟು 58 ಸದಸ್ಯರು ಅರ್ಹತೆ ಹೊಂದಿದ್ದಾರೆ.



