Connect with us

Dvgsuddi Kannada | online news portal | Kannada news online

ದಾವಣಗೆರೆ: ನಿವೇಶನ ಹಕ್ಕುಪತ್ರ ಹಂಚಿಕೆ ವಿಚಾರಕ್ಕೆ ಆಡಳಿತ-ವಿಪಕ್ಷ ‌ನಡುವೆ ಮಾತಿನ ಜಟಾಪಟಿ

ದಾವಣಗೆರೆ

ದಾವಣಗೆರೆ: ನಿವೇಶನ ಹಕ್ಕುಪತ್ರ ಹಂಚಿಕೆ ವಿಚಾರಕ್ಕೆ ಆಡಳಿತ-ವಿಪಕ್ಷ ‌ನಡುವೆ ಮಾತಿನ ಜಟಾಪಟಿ

ದಾವಣಗೆರೆ: ವಸತಿ ಯೋಜನೆಯಡಿ‌ (housing scheme) ಮಂಜೂರಾದ‌ ನಿವೇಶನಗಳಿಗೆ (Site) ಹಕ್ಕುಪತ್ರ ಹಂಚಿಕೆ ವಿಚಾರಕ್ಕೆ ದಾವಣಗೆರೆ ಮಹಾನಗರ ಪಾಲಿಕೆ (davangere municipal corporation) ಆಡಳಿತ-ವಿಪಕ್ಷ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆಯಿತು.

ಇಂದು (ಫೆ.06) ಮೇಯರ್ ಕೆ. ಚಮನ್ ಸಾಬ್ ಬಜೆಟ್ ಮಂಡನೆ ಮಾಡಿದರು. ಈ ವೇಳೆ 1403 ಜನ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ನ್ಯಾಯಾಲಯದ ತೀರ್ಪಿನ ನಂತರ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು. ಬಜೆಟ್ ಗೆ ಇದಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ಪ್ಲಾಸ್ಟಿಕ್ ಚಂಬು ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿ ಗದ್ದಲ ಶುರು ಮಾಡಿದರು.

ಇದನ್ನೂ ಓದಿ:ದಾವಣಗೆರೆ ಮಹಾನಗರ ಪಾಲಿಕೆ‌; ಉಳಿತಾಯ ಬಜೆಟ್ ಮಂಡನೆ

ಆರ್ಥಿಕ ಹಿಂದುಳಿದರಿಗೆ ಸ್ವಂತ ನಿವೇಶನದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆ. ಬೇವಿನಹಳ್ಳಿ ಹಾಗೂ ಬನ್ನಿಕೋಡನಲಗಲಿ 26 ಎಕರೆಗಳ ಜಮೀನನ್ನು ಅಭಿವೃದ್ಧಿಪಡಿಸಿ ಲೇ ಔಟ್ ನಿರ್ಮಿಸಿ ಒಟ್ಟು 966 ಜನ ವಸತಿ ರಹಿತರಿಗೆ ‌ಹಂಚಲಾಗಿದೆ. ಬಾತಿ ಗ್ರಾಮ ಹಾಗೂ ದೊಡ್ಡ ಬೂದಿಹಾಳ ಗ್ರಾಮದಲ್ಲೂ ಒಟ್ಟು 53 ಎಕರೆ ಜಮೀನು ಖರೀದಿಸಿ ಅಭಿವೃದ್ಧಿಪಡಿಸಲಾಗಿದೆ. ಎಸ್. ಎ. ರವೀಂದ್ರನಾಥ್ ಶಾಸಕರಾಗಿದ್ದಾಗ ಹಂಚಿಕೆ ಮಾಡಲಾದ ಆಶ್ರಯ ನಿವೇಶನಗಳ ಹಕ್ಕುಪತ್ರ ನೀಡುವಂತೆ ವಿಪಕ್ಷ ಸದಸ್ಯರು ಪಟ್ಟುಹಿಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರಾದ ಎ. ನಾಗರಾಜ್ ಹಾಗೂ ಗಡಿಗುಡಾಳ್ ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.

 

ದಾವಣಗೆರೆ: ಡ್ರಾಪ್ ಕೊಡುವುದಾಗಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನ ಹಿಡಿದ ಕೂಲಿ ಕಾರ್ಮಿಕ‌ ಮಹಿಳೆಯರು..!

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟುಹಿಡಿದರು.ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್ ಕೆ. ಚಮನ್ ಸಾಬ್ , ಉತ್ತರ ವಿಧಾನಸಭಾ ಕ್ಷೇತ್ರದಲ್ಲಿನ ಆಶ್ರಯ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಕೆಲ ತೊಂದರೆಗಳಿವೆ. ಹರಿಹರ ಕ್ಷೇತ್ರಕ್ಕೆ ದಾವಣಗೆರೆ ಮತದಾರರ ಸೇರ್ಪಡೆಯಾಗುತ್ತದೆ. ಈ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಾವಣಗೆರೆ: ಜಿಎಂ ಪಾಲಿಟೆಕ್ನಿಕ್ ಕಾಲೇಜಿನ15 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ಆಡಳಿತ ಪಕ್ಷದ ಎ. ನಾಗರಾಜ್ ಮತ್ತು ಗಡಿಗುಡಾಳ್ ಮಂಜುನಾಥ್, ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಭಾರೀ ಹಗರಣ ನಡೆದಿದೆ. ಹಣ ಪಡೆದು ನಿವೇಶನ ನೀಡಲಾಗುತ್ತಿದೆ. ಬಿಜೆಪಿಯ ಕಾರ್ಯಕರ್ತರು ಪ್ರತಿ ಸೈಟ್ ಎರಡು ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಇಆಡಿಯೋ ಕಾಂಗ್ರೆಸ್ ಪಾಲಿಕೆ ಸದಸ್ಯ ಎ.ನಾಗರಾಜ್ ಪ್ರದರ್ಶನ ಮಾಡಿದ್ದಾರೆ. ಆಗ ಆಡಳಿ-ವಿಪಕ್ಷಗಳ ವಾಗ್ದಾಳಿ ಜೋರಾಗಿತ್ತು. ಹಣ ಕೊಟ್ಟವರ ಹೆಸರು ಬಹಿರಂಗಪಡಿಸಬೇಕು. ಇಲ್ಲಿಗೆ ಕರೆಯಿಸಿ ಎಂದು ಬಿಜೆಪಿ ಸದಸ್ಯರು ಸವಾಲೆಸೆದರು.

ಅವ್ಯವಹಾರ ಆಗಿದ್ದರೆ, ಹಣ ಪಡೆದಿದ್ದರೆ ತನಿಖೆ ನಡೆಸಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ. ಅರ್ಹರಿಗೆ ನೀಡಿ. ಭ್ರಷ್ಟಾಚಾರವಾಗಿದ್ದರೆ ತನಿಖೆ ನಡೆಸಿ, ಅನರ್ಹರನ್ನು ತೆಗೆದು ಅರ್ಹರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top