ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆಯ ಆವರಣದಲ್ಲಿ ಪಾಲಿಕೆಯ ಸದಸ್ಯರ ಮತ್ತು ಸಿಬ್ಬಂದಿಗಳ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಕಲ್ಪಿಸಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ನಿರ್ವಹಣೆಗೆ ಆಸಕ್ತ ವ್ಯಕ್ತಿ, ಏಜೆನ್ಸಿಗಳಿಂದ ಅರ್ಜಿ ಆಹ್ವಾನಸಲಾಗಿದೆ.
ವಾಹನ ನಿಲುಗಡೆಗೆ ಸೂಕ್ತ ದರ ನಿಗಧಿಪಡಿಸಿ, ವಾಹನ ನಿಲುಗಡೆ ಸ್ಥಳದ ನಿರ್ವಹಣೆ ಮಾಡಲು ಆಸಕ್ತ ವ್ಯಕ್ತಿ ಏಜೆನ್ಸಿ, ಸಂಘ ಮತ್ತು ಸಂಸ್ಥೆ ಇತರರಿಂದ ಅಜಿಗಳನ್ನು ಅಹ್ವಾನಿಸಲಾಗಿದೆ. ಆಸಕ್ತಿಯಳ್ಳವರು ಮೇ.13 ರ ಸಂಜೆ 05 ಗಂಟೆಯೊಳಗಾಗಿ ತಮ್ಮ ವಿವರಗಳು, ಅನುಭವಗಳೊಂದಿಗೆ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಹ ಏಜೆನ್ಸಿಗಳನ್ನು ಸಂದರ್ಶನದ ಮುಖಾಂತರ ಅಂತಿಮಗೊಳಿಸಿ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



