ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನ ಮಾಲೀಕರು ಸಾರ್ವಜನಿಕರಿಗೆ ಕಸ ಹಾಕಲು ಅವಕಾಶ ಮಾಡಿದ್ದು, ಅನುಪಯುಕ್ತ ಗಿಡ ಗಂಟೆಗಳು ಬೆಳೆದು ನೆರೆ ಹೊರೆಯವರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿರುವ ಕಾರಣ ಖಾಲಿ ನಿವೇಶನಗಳ ಮಾಲೀಕರು ಕಾಂಪೌಂಡ್, ತಡೆಗೋಡೆ ನಿರ್ಮಾಣ ಮಾಡಿಕೊಳ್ಳಲು ದಾವಣಗೆರೆ ಮಹಾನಗರ ಪಾಲಿಕೆ ಸೂಚನೆ ನೀಡಿದೆ.
ಖಾಲಿ ನಿವೇಶನ ಈ ಕೂಡಲೇ ಸ್ವಚ್ಛಗೊಳಿಸಿ ಯಾವುದೇ ಅನಧಿಕೃತ ವ್ಯಕ್ತಿಗಳು ಹಾಗು ಬಿಡಾಡಿ ಪ್ರಾಣಿಗಳ ಪ್ರವೇಶಕ್ಕೆ ಅವಕಾಶವಿಲ್ಲದಂತೆ 30 ದಿನಗಳೊಳಗೆ 6 ಅಡಿ ಎತ್ತರದ ಕಾಂಪೌಂಡ್, ತಡೆಗೋಡೆ ನಿರ್ಮಿಸಿಕೊಳ್ಳಬೇಕು. ಒಂದು ವೇಳೆ ಮಾಲೀಕರು ಉಲ್ಲಂಘನೆ ಮುಂದುವರೆಸಿದಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಕ್ರಮಕೈಗೊಳ್ಳಲಾಗುವುದು. ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.