ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಿ ರಾಜ್ಯ ಸರ್ಕಾರ ಸೆ.2ರಂದು ಅಧಿಸೂಚನೆ ಹೊರಡಿಸಿದೆ. ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ‘ಎ’, ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ‘ಬಿ’ ಗೆ ಮೀಸಲಾತಿ ಘೋಷಿಸಿದೆ. ಒಟ್ಟು 45 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ.
ಹಾಲಿ ಮೇಯರ್ ವಿನಾಯಕ ಪೈಲ್ವಾನ್ ಹಾಗೂ ಉಪ ಮೇಯರ್ ಯಶೋಧಾ (ಬಿಜೆಪಿ) ಅವರ ಅಧಿಕಾರ ಅವಧಿ ಮಾರ್ಚ್ 17ಕ್ಕೆ ಮುಕ್ತಾಯವಾಗಿತ್ತು. ಮೀಸಲಾತಿ ಘೋಷಣೆ ವಿಳಂಬವಾಗಿದ್ದರಿಂದ ಆ ಸ್ಥಾನದಲ್ಲಿ ಅವರೇ ಮುಂದುವರಿದಿದ್ದರು.



