ದಾವಣಗೆರೆ: ನೀರಿನ ತೀವ್ರ ಕೊರತೆ, ಭದ್ರಾ ನಾಲೆಯಲ್ಲಿ ನೀರಿನ ಹರಿವು ನಿಂತಿದೆ. ಹೀಗಾಗಿ ಸಾರ್ವಜನಿಕರು ಕಟ್ಟಡ ನಿರ್ಮಾಣ, ವಾಹನ ಸ್ವಚ್ಛತೆ, ಕೈತೋಟ, ಮನೋರಂಜನಾ ಕಾರಂಜಿ ಸೇರಿದಂತೆ ಹಲವು ಕಾರ್ಯಗಳಿಗೆ ನೀರನ್ನು ಬಳಸದಂತೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ನಿರ್ಬಂಧ ವಿಧಿಸಿದ್ದಾರೆ.
ಬಲನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕಳೆದ ಮಳೆಗಾಲದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ.ಇಲ ಇನ್ನೂ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದು, ಫೆ.28ರಿಂದ ಭದ್ರಾ ನಾಲೆಯಲ್ಲಿ ನೀರಿನ ಹರಿವು ನಿಲ್ಲಿಸಿರುವುದರಿಂದ ನಗರಕ್ಕೆ ಕೆಲ ದಿನ ಮಾತ್ರ ನೀರು ಸರಬರಾಜು ಮಾಡಲು ಲಭ್ಯವಿದೆ. ಹೀಗಾಗಿ ನಗರದಲ್ಲಿ ನೀರು ಪೋಲು ಮಾಡುವುದನ್ನು ತಡೆಗಟ್ಟಲು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸಬೇಕು. ನಾಗರಿಕರು ನಲ್ಲಿಯ ನೀರನ್ನು ಕುಡಿಯುವುದಕ್ಕೆ ಉಪಯೋಗಿಸಬೇಕು.
ವಾಹನ ಸ್ವಚ್ಛತೆ, ಕೈತೋಟ, ಮನೋರಂಜನಾ ಕಾರಂಜಿ, ಸಿನಿಮಾ ಮಂದಿರ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಕುಡಿಯಲು ಹಾಗೂ ಇತರೆ ಬಳಕೆಗೆ ರಸ್ತೆ ಸ್ವಚ್ಛತೆಗೆ ಹಾಗೂ ಇತರೆ ಉದ್ದೇಶಕ್ಕೆ ಕುಡಿಯುವ ನೀರನ್ನು ಬಳಸದಂತೆ ದಿನನಿತ್ಯ ಗೃಹ ಬಳಕೆಗೆ ಬೊರ್‌ವೆಲ್ ನೀರನ್ನು ಉಪಯೋಗಿಸುವಂತೆ ತಿಳಿಸಿದ್ದಾರೆ.



