ದಾವಣಗೆರೆ: ಜಲಸಿರಿ ಯೋಜನೆಯಡಿ ನಗರದ ಪಿ.ಬಿ. ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪಾಲಿಕೆಯ 900 ಎಂಎಂ ಮುಖ್ಯ ಕೊಳಾಯಿ ಮಾರ್ಗಕ್ಕೆ ಕೆಯುಐಡಿಎಫ್‌ಸಿಯ ಮುಖ್ಯ ಕೊಳಾಯಿ ಮಾರ್ಗದ ಯೋಜನೆ ಕಾರ್ಯಕೈಗೊಳ್ಳಲು ಉದ್ದೇಶಿಸಿರುವುದರಿಂದ ಏ. 28 ಮತ್ತು 29ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.



