ದಾವಣಗೆರೆ: ದಾವಣಗೆರೆ ಉಪ ಚುನಾವಣೆ ರಣ ಕಣ ಸಿದ್ಧವಾಗಿದ್ದು, ಮಾ.29 ರಂದು ಪಾಲಿಕೆಯ ವಾರ್ಡ್ ನಂ.20 (ಭಾರತ್ ಕಾಲೋನಿ) ಮತ್ತು ವಾರ್ಡ್ ನಂ. 22 (ಯಲ್ಲಮ್ಮ ನಗರ)ರಲ್ಲಿ ಉಪ ಚುನಾವಣೆ ನಡೆಯಲಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿದೆ ನಾಮಪತ್ರ ಸಲ್ಲಿಸಿದರು.
ಯಲ್ಲಮ್ಮನಗರ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವಾನಂದ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಮೇಯರ್ ಎಸ್. ಟಿ. ವೀರೇಶ್, ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಹಾಗೂ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಜೊತೆ ಆಗಮಿಸಿ ಚುನಾವಣಾಧಿಕಾರಿ ಮಮತಾ ಹೊಸ ಗೌಡರ್ ಗೆ ನಾಮ ಪತ್ರ ಸಲ್ಲಿಸಿದರು.ಇದೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿಸ್ವಾಮಿ ಅವರು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಹಾಗೂ ಪಾಲಿಕೆ ವಿಪಕ್ಷ ನಾಯಕ ನಾಗರಾಜ್, ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಅವರ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಇನ್ನು ವಾರ್ಡ್ 20 ರಲ್ಲಿ ಪರಿಶಿಷ್ಪ ಪಂಗಡ ಮಹಿಳಾ ಕ್ಷೇತ್ರಕ್ಕೆ ಮೀಸಲಾಗಿದ್ದ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀನಾಕ್ಷಿ ಜಗದೀಶ್ ಹಾಗೂ ಬಿಜೆಪಿಯಿಂದ ರೇಣುಕಾ ಕೃಷ್ಣ ಅವರು ಚುನಾವಣಾಧಿಕಾರಿ ಲಕ್ಷ್ಮೀಕಾಂತ್ ಬೊಮ್ಮನವರ್ ಗೆ ನಾಮಪತ್ರ ಸಲ್ಲಿಸಿದರು.
ಭಾರತ್ ಕಾಲೋನಿ ಪಾಲಿಕೆ ಕಾಂಗ್ರೆಸ್ ಸದಸ್ಯೆಯಾಗಿದ್ದ ಯಶೋಧ ಉಮೇಶ್ 2020ರ ಮೇಯರ್ ಚುನಾವಣೆಯಲ್ಲಿ ರಾಜೀನಾಮೆ ನೀಡಿದ್ದರು. ಹಾಗೆಯೇ 2021ರ ಮೇಯರ್ ಚುನಾವಣೆ ವೇಳೆ ಯಲ್ಲಮ್ಮ ನಗರದದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದೇವರಮನಿ ಶಿವಕುಮಾರ್ ರಾಜೀನಾಮೆ ನೀಡಿದ್ದರು. ಈ ಎರಡು ಕ್ಷೇತ್ರಗಳಿಗೆ ಮಾ. 29 ರಂದು ಉಪ ಚುನಾವಣೆ ನಡೆಯಲಿದ್ದು, ಎರಡು ಪಕ್ಷಕ್ಕೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ. 31 ರಂದು ಚುನಾವಣೆ ಫಲಿತಾಂಶ ಹೊರ ಬೀಳಲಿದೆ.



