ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷದಿಂದ ಇಂದು (ಫೆ.21) 17.91 ಕೋಟಿ ಉಳಿತಾಯದ ಬಜೆಟ್ ಮಂಡಿಸಲಾಯಿತು. ಪ್ರತಿಪಕ್ಷ ನಾಯಕರು ಕಿವಿಗೆ ಹೂವಿಟ್ಟುಕೊಂಡು ಪ್ರತಿರೋಧ ವ್ಯಕ್ತಪಡಿಸಿದರು.
ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಸತತ ಎರಡನೇಯ ಬಜೆಟ್ ಮಂಡಿಸಿದರು. ಆರಂಭಿಕ ಶಿಲ್ಕು 6725.65 ಲಕ್ಷ, 16, 401. 85 ರಾಜ್ಯ ಸರ್ಕಾರದ ಅನುದಾನ, ತೆರಿಗೆ ಮತ್ತಿತರ ಮೂಲಗಳಿಂದ ಒಟ್ಟು 49063.60 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಜನಪರ ಅಭಿವೃದ್ಧಿ ಕಾರ್ಯ, ನೌಕರರು ಮತ್ತು ಸಿಬ್ಬಂದಿ ವೇತನ, ನಿರ್ವಹಣೆ ಇತರೆಗೆ ಖರ್ಚು 53998.17 ಲಕ್ಷ ಅಂದಾಜಿಸಲಾಗಿದೆ.ಮುಂದುವರಿದ ಶಿಲ್ಕು, ರಾಜ್ಯ ಸರ್ಕಾರದ ಅನುದಾನ, ತೆರಿಗೆ ಸಂಗ್ರಹ, ಇತರೆ ಮೂಲಗಳಿಂದ ಬರುವ 49063.60 ಲಕ್ಷ ಆದಾಯದಲ್ಲಿ ಅಭಿವೃದ್ಧಿ ಕಾರ್ಯ, ವೇತನ, ನಿರ್ವಹಣೆ ಒಳಗೊಂಡಂತೆ ಇತರೆಯದಕ್ಕೆ 53998.17 ಲಕ್ಷ ಖರ್ಚು ಮಾಡಿದರೂ 1791.08 ಲಕ್ಷ ಉಳಿತಾಯ ಆಗಲಿದೆ ಎಂದು ಮ ತಿಳಿಸಿದರು.
ಮೂರನೇ ಬಾರಿಗೂ ಉಳಿತಾಯದ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಮೇಜು ತಟ್ಟಿದರು. ಕಳೆದ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಯಾವುದೇ ಕೆಲಸ ಮಾಡಿಲ್ಲ. ಇದೊಂದು ನಿರಾಸದಾಯಕ ಬಜೆಟ್ . ಇದು ಬಿಜೆಪಿ ಆಡಳಿತದ ಕೊನೆ ಬಜೆಟ್ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ರಾಕೇಶ್ ಜಾಧವ್, ಬಿ.ಎಚ್. ಉದಯ್ ಕುಮಾರ್, ಎಸ್. ಮಂಜಾನಾಯ್ಕ, ಪ್ರತಿಪಕ್ಷ ನಾಯಕವ ಕಾಂಗ್ರೆಸ್‌ನ ಗಡಿಗುಡಾಳು ಮಂಜುನಾಥ್, ಎ. ನಾಗರಾಜ್, ಕೆ. ಚಮನ್ ಸಾಬ್ ವಿ, ಆಯುಕ್ತೆ ಜಿ. ರೇಣುಕಾ ಮತ್ತಿತರಿದ್ದರು.



