ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ 1.50 ಕೋಟಿ ಬರಬೇಕಿದೆ. ಈ ಸಂಬಂಧ 58 ಮಳಿಗೆಗಳಿಗೆ ಬೀಗ ಹಾಕಲಾಗಿದೆ. ನಗರದಲ್ಲಿ 506 ಮಳಿಗೆಗಳಿಂದ 2.50 ಕೋಟಿ ಬಾಡಿಗೆ ಹಣ ಬರಬೇಕಿತ್ತು. ಈಗ 1 ಕೋಟಿ ವಸೂಲಿ ಮಾಡಲಾಗಿದೆ. ಇನ್ನು 1.50 ಕೋಟಿ ಬಾಕಿ ಇದೆ. ಕಳೆದ 15 ದಿನದಲ್ಲಿ 40 ಲಕ್ಷ ಬಾಡಿಗೆ ಕಟ್ಟಿದ್ದಾರೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಹೇಳಿದರು.
ಮೋತಿ ಚಿತ್ರಮಂದಿರದ ಹಿಂಭಾಗದ ಗುಜರಿ ಲೈನ್ ನಲ್ಲಿ 60 ಮಳಿಗೆಗಳಲ್ಲಿ 58 ಮಳಿಗೆಗಳು ಬಾಡಿಗೆ ಪಾವತಿಸಿಲ್ಲ. ನೋಟಿಸ್ ನೀಡಿದರೂ ಉತ್ತರಿಸಿಲ್ಲ. ಮಾಲೀಕರು ಒಬ್ಬರಾದರೇ ಮಳಿಗೆಯಲ್ಲಿ ಇರುವವರೇ ಬೇರೆ. ಪರವಾನಿಗೆ ಕೇಳಿದರೆ ಮನೆಯಲ್ಲಿದೆ ಎನ್ನುತ್ತಿದ್ದಾರೆ. ಹೀಗಾಗಿ ಬಾಡಿಗೆ ಕಟ್ಟದ ಮಳಿಗೆಗಳಿಗೆ ಬೀಗ ಹಾಕಲಾಗಿದೆ ಎಂದು ಎಂದು ವಿವರಿಸಿದರು.
40 ವರ್ಷದಿಂದ ಇದೇ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. 2009 ರಲ್ಲಿ ಏಕಾಏಕಿ ಬಾಡಿಗೆ ದರ ಹೆಚ್ಚಿಸಲಾಯಿತು. ಇದನ್ನು ಪ್ರಶ್ನಿಸಿ ಕೋರ್ಟ್ ಹೋಗಿದ್ದೇವೆ. ಇನ್ನೂ 2017 ರಲ್ಲಿ ಬಾಡಿಗೆ ಮಳಿಗೆ ಬೆಂಕಿ ಬಿದ್ದು ಸುಟ್ಟು ಹೋಗಿವೆ. ಆಗ ಪಾಲಿಕೆ, ಮಳಿಗೆ ಹೊಸದಾಗಿ ನಿರ್ಮಿಸಿಕೊಡುವುದಾಗಿ ಹೇಳಿತ್ತು. ಮಳಿಗೆ ನಿರ್ಮಿಸಿ ಕೊಟ್ಟಿಲ್ಲ. ನಾವು ಹೊಸದಾಗಿ ಮಳಿಗೆ ನಿರ್ಮಿಸಿಕೊಂಡಿದ್ದೇವೆ. ಹೀಗಾಗಿ ನಾವು ಕೋರ್ಟ್ ನಲ್ಲಿಯೇ ಕೋರ್ಟ್ ನಲ್ಲಿ ಬಾಡಿಗೆ ಪಾವತಿಸುತ್ತೇವೆ ಎಂದು ಮಳಿಗೆ ಮಾಲೀಕರು ಹೇಳಿದ್ದಾರೆ.



