ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ನವೀಕೃತ ಈಜುಕೊಳದ ಉದ್ಘಾಟನೆಗೆ ಸಿದ್ಧವಾಗಿದ್ದು, ಫೆ.20ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಬಗ್ಗೆ ಅಂತಿಮ ಸಿದ್ಧತೆ ಕುರಿತು ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಆಯುಕ್ತರು,ನವೀಕೃತ ಈಜುಕೊಳದಲ್ಲಿ ಯಾವುದೇ ರೀತಿಯ ದೂರು ಬರದಂತೆ ನಿರ್ವಹಿಸಬೇಕು. ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಳ್ಳಬೇಕು. ನೀರನ್ನು ಕಾಲ ಕಾಲಕ್ಕೆ ಬದಲಾಯಿಸಬೇಕು. ಯಾವುದೇ ಸಮಸ್ಯೆ ಬಂದರೂ ಅಧಿಕಾರಿಗಳ ಗಮನಕ್ಕೆ ಗಮನಕ್ಕೆ ತರಬೇಕು. ಇಲ್ಲಿಗೆ ಬಂದರವರು ಸಂತೋಷದಿಂದ ನೀರಿನಲ್ಲಿ ಆಟವಾಡುವ ವಾತಾವರಣ ಕಲ್ಪಿಸುವಂತೆ ಸೂಚಿಸಿದರು. ತರಬೇತಿ ನೀಡಲು ನುರಿತ ಈಜು ತರಬೇತುದಾರರನ್ನು ನೇಮಕ ಮಾಡಲಾಗಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
- ವೇಳಾಪಟ್ಟಿ
- ಬೆಳಿಗ್ಗೆ 6 ಗಂಟೆಯಿಂದ 9ಗಂಟೆಯವರೆಗೆ ಸಾರ್ವಜನಿಕರಿಗೆ
- ವೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮಹಿಳೆಯರಿಗೆ ಮಾತ್ರ
- 12ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಮತ್ತೆ ಎಲ್ಲಾ ಸಾರ್ವಜನಿಕರಿಗೆ ಪ್ರವೇಶ
- ಸಂಜೆ ಕಲಿಕಾ ತರಬೇತಿ
- ದರ ಪಟ್ಟಿ
- ಪ್ರತಿ ಗಂಟೆಗೆ 10 ವರ್ಷದೊಳಗಿನ ಮಕ್ಕಳಿಗೆ 40 ರೂ.
- 10 ವರ್ಷ ಮೇಲ್ಪಟ್ಟವರಿಗೆ 60 ರೂ.
- ಒಂದು ತಿಂಗಳಿಗೆ ಮಕ್ಕಳಿಗೆ 800 ರೂ.
- ಹಿರಿಯರಿಗೆ 1000 ರೂ.