ದಾವಣಗೆರೆ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿದ್ದೇ ಸಂಸದ ಜಿ.ಎಂ.ಸಿದ್ದೇಶ್ವರ ಎಂದು ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಕೋಟಿ, ಕೋಟಿ ಹಣ ಲೋಕಾಯುಕ್ತ ದಾಳಿಯಲ್ಲಿ ವಶ ಪಡಿಸಿಕೊಂಡ ಹಿನ್ನೆಲೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಬಿಜೆಪಿ ಅವರು ಡಿಕೆ ಶಿವಕುಮಾರ್ ದಾಳಿ ಮಾಡಿಸಿದ್ದಾರೆ ಎಂದು ಹೇಳ್ತಾರೆ.ಆದರೆ, ನಮ್ಮ ಪಕ್ಷದವರು ಹೇಳ್ತಾರೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಅವರೇ ಈ ದಾಳಿ ಮಾಡಿಸಿದ್ದಾರೆ ಎಂದರು.
ಮಾಡಾಳು ವಿರೂಪಾಕ್ಷಪ್ಪ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ನಡುವೆ ವೈಮನಸ್ಸು ಇದೆ. ಈ ಹಿನ್ನೆಲೆಯಲ್ಲಿ ಅವರೇ ಹೇಳಿ ಈ ದಾಳಿ ಮಾಡಿಸಿದ್ದಾರೆ ಎಂದು ಎಂದು ತಿಳಿಸಿದರು. ಗುತ್ತಿಗೆ ಕೊಡಿಸುವ ಸಂಬಂಧ ಲಂಚಕ್ಕೆ ಬೇಡಿಕೆ ಇಟ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ 40 ಲಕ್ಷ ಹಣದೊಂದಿಗೆ ಬೆಂಗಳೂರಿನ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದರು. ಈ ಪ್ರಕರಣ ನಂತರ ಚನ್ನಗಿರಿ ತಾಲ್ಲೂಕಿನ ಶಾಸಕರ ಮನೆ ಮೇಲೂ ಲೋಕಾಯುಕ್ತ ಪೊಲೀಸರು ರೈಡ್ ಮಾಡಿದ್ದರು.