ದಾವಣಗೆರೆ: ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪಗೆ ವಯಸ್ಸು ಆಗಿ ಬುದ್ಧಿ ಭ್ರಮಣೆ ಆಗಿರಬೇಕು. ನಾನು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ದಾಳಿ ಮಾಡಿಸುವಷ್ಟು ಸಣ್ಣತನಕ್ಕೆ ಇಳಿದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿದ್ದು, ಜಿ.ಎಂ.ಸಿದ್ದೇಶ್ವರ ಅಂತಾ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ವಿರೂಪಾಕ್ಷಪ್ಪ ಸ್ನೇಹಿತರು. ಈ ಹಿಂದೆ ವಿರೂಪಾಕ್ಷಪ್ಪ ನನ್ನ ವಿರುದ್ಧ ಗಲಾಟೆ ಮಾಡಿದ್ದರು. ಇದನ್ನೇ ಆಧಾರಿಸಿ ನಮ್ಮ ಇಬ್ಬರ ನಡುವೆ ಮೈಮನಸ್ಸಿದೆ. ದಾಳಿ ಮಾಡಿಸಿದ್ದು ನಾನು ಎಂದಿದ್ದಾರೆ. ಶಾಮನೂರು ಶಿವಶಂಕರಪ್ಪಗೆ ವಯಸ್ಸು ಆಯ್ತಲ್ಲ, ಹೀಗಾಗಿ ಬುದ್ಧಿ ಭ್ರಮಣೆ ಆಗಿರಬೇಕು. ಇದರಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ವಿರೂಪಾಕ್ಷಪ್ಪ ಪಕ್ಷದಿಂದ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಅಧ್ಯಕ್ಷರು ನಿರ್ಧಾರ ಕೈಗೊಳ್ಳುತ್ತಾರೆ. ನಾನು ಅಧ್ಯಕ್ಷನಲ್ಲ, ಅಧ್ಯಕ್ಷನಾಗಿದ್ರೆ ಏನು ಮಾಡುತ್ತಿದ್ದೆ ಅಂತಾ ಹೇಳಬಹುದಿತ್ತು ಎಂದರು.