ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 48ರ ಜಿ.ಪಂ ಆಫೀಸ್ ಬಳಿ ಸ್ಪಿರಿಟ್ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ಪಿರಿಟ್ ರಸ್ತೆಯಲ್ಲಿ ಹರಿದಿದೆ. ಇದನ್ನು ಕಂಡ ಜನ ಸ್ಪಿರಿಟ್ ಗಾಗಿ ಮುಗಿ ಬಿದ್ದಿದ್ದರು.
ಸ್ಪಿರಿಟ್ ತುಂಬಿಕೊಂಡು ಹೋಗುತ್ತಿದ್ದ ಬೃಹತ್ ಲಾರಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಪಲ್ಟಿಯಾಗಿದೆ. ಜನರು ಸ್ಪಿರಿಟ್ ಗಾಗಿ ಮುಗಿ ಬಿದ್ದಿದ್ದರಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿದರು.