ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಅಂಗವಾಗಿ ಹಿರಿಯ ನಾಗರಿಕರಿಂದ ಮಂಗಳವಾರ ಏಪ್ರಿಲ್ 30 ರಂದು ಮತದಾನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.
ಜಾಥ ಎಂ.ಸಿ.ಸಿ.ಬಿ ಬ್ಲಾಕ್ ಚಿಲ್ಡ್ರನ್ ಪಾರ್ಕ್‍ನಿಂದ ಆರಂಭಗೊಂಡು, ಗುಂಡಿ ಸರ್ಕಲ್ ನಲ್ಲಿ ಅಂತ್ಯವಾಯಿತು. ಮತದಾನ ಜಾಥಾದಲ್ಲಿ ಭಾಗವಹಿಸಿದದ ಶತಮಾನ ದಾಟಿದ ಹಿರಿಯ ನಾಗರಿಕ ಮತದಾರರಾದ ಶೇಕ್ ಮದರ್ ಸಾಬ್ (103), ಕೆ ರಾಜು (103), ಬಸಮ್ಮ (101), ಹನುಮಂತಪ್ಪ (103), ಹನುಮಮ್ಮ (102) ಇವರುಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕ ಇಲಾಖೆ ಉಪನಿರ್ದೇಶಕ ಕೆ.ಕೆ. ಪ್ರಕಾಶ್, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಗುರುಮೂರ್ತಿ, ನಿವೃತ್ತ ಸಂಘದ ಅಧ್ಯಕ್ಷರಾದ ಭರತ್‍ರಾಜ್, ನಿವೃತ್ತ ಎಸ್ಪಿ ರವಿನಾರಾಯಣ್, ಹಿರಿಯ ನಾಗರಿಕ ಮತದಾರರು ಮತ್ತು ಇನ್ನಿತರರು ಉಪಸ್ಥಿತರಿದ್ದರು.



