ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತ ಅಂದರೆ ರಾಜ್ಯದ ಎರಡನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಮತದಾನದ ಸಿಬ್ಬಂದಿಗಳಿಗೆ ಏಪ್ರಿಲ್ 8 ರಂದು ಬೆಳಗ್ಗೆ 10 ಗಂಟೆಗೆ ಆಯಾ ತಾಲ್ಲೂಕಿನ ಮಸ್ಟರಿಂಗ್, ಡಿಮಸ್ಟರಿಂಗ್ ಕೇಂದ್ರ ಹಾಗೂ ತರಬೇತಿಗೆ ನೇಮಕವಾದ ಸ್ಥಳದಲ್ಲಿ ಮೊದಲ ಸುತ್ತಿನ ತರಬೇತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಮಸ್ಟರಿಂಗ್, ಡಿಮಸ್ಟರಿಂಗ್, ತರಬೇತಿ ನಡೆಯುವ ಕೇಂದ್ರಗಳ ವಿವರ; ಜಗಳೂರು; ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ; ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ಹರಪನಹಳ್ಳಿ ರಸ್ತೆ, ಹರಿಹರ, ದಾವಣಗೆರೆ ಉತ್ತರ; ಡಿಆರ್‍ಆರ್ ವಿದ್ಯಾಸಂಸ್ಥೆ, ಪಿ.ಬಿ.ರಸ್ತೆ, ದಾವಣಗೆರೆ ದಕ್ಷಿಣ; ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಪಿ.ಜೆ.ಬಡಾವಣೆ, ಹೈಸ್ಕೂಲ್ ಮೈದಾನ, ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಮತದಾನ ಸಿಬ್ಬಂದಿಗಳಿಗೆ ಸಿದ್ದಗಂಗಾ ವಿದ್ಯಾಸಂಸ್ಥೆ, ಸಿದ್ದರಾಮೇಶ್ವರ ಬಡಾವಣೆ ಇಲ್ಲಿ ತರಬೇತಿ ನಡೆಯಲಿದೆ. ಮಾಯಕೊಂಡ; ಶ್ರೀ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು, ತರಬೇತಿಯು ತರಳಬಾಳು ವಿದ್ಯಾಸಂಸ್ಥೆ, ಅನುಭವ ಮಂಟಪ, ಹದಡಿ ರಸ್ತೆ, ದಾವಣಗೆರೆ. ಚನ್ನಗಿರಿ; ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ; ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ, ಹೊನ್ನಾಳಿ ಇಲ್ಲಿ ಮಸ್ಟರಿಂಗ್, ಡಿ.ಮಸ್ಟರಿಂಗ್ ಮತ್ತು ತರಬೇತಿ ನಡೆಯಲಿದೆ.
ಮತದಾನದ ಪಿಆರ್‍ಓ, ಎಪಿಆರ್‍ಓಗಳಿಗೆ ನೇಮಕಾತಿ ಆದೇಶ ಕಳುಹಿಸಲಾಗಿದ್ದು ಆದೇಶ ನೀಡಿದ ಎಲ್ಲಾ ಮತದಾನ ಅಧಿಕಾರಿಗಳು, ಸಿಬ್ಬಂದಿಗಳು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ತರಬೇತಿಗೆ ಏಪ್ರಿಲ್ 8 ರಂದು ನಿಯೋಜಿಸಿದ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಯರು ತಿಳಿಸಿದ್ದಾರೆ.



