ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ತುಂಗಭದ್ರಾ ನದಿ ಸೇತುವೆ ಪಕ್ಕದ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಇರುವ ಚೆಕ್ ಪೋಸ್ಟ್‌ನಲ್ಲಿ ನಿನ್ನೆ ಎರಡು ಬೈಕ್‌ಗಳಲ್ಲಿ ಸಾಗಿಸುತ್ತಿದ್ದ 2.81 ಲಕ್ಷರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಭಾವನಾ ಬಸವರಾಜ್ ಮತ್ತು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.
ಕವಲೆತ್ತು ಗ್ರಾಮದ ಕೆಎ17 ಎಕ್ಸ್9909 ಸಂಖ್ಯೆ ಬೈಕ್ ನ ಹನುಮಂತಪ್ಪ ಗುಡ್ಡದ್ ಎಂಬ ಯುವಕನಿಂದ 1.84 ಲಕ್ಷ ಮತ್ತು ಸಂತೋಷ ಯು.ಹೆಚ್ (ಕೆಎ 17 ಹೆಚ್‌ಸಿ 4987) ಹಾಲೂರು ಗ್ರಾಮದ ಯುವಕನಿಂದ 97.5 ಸಾವಿರ ವಶಕ್ಕೆ ಪಡೆದು, ಆ ಹಣವನ್ನು ಖಜಾನೆಯಲ್ಲಿ ಇರಿಸಿದ್ದು, ಜಿಲ್ಲಾ ಚುನಾವಣೆ ಶಾಖೆಯ ಗಮನಕ್ಕೆ ತರಲಾಗಿದ್ದು, ಅವರು ಹಣವನ್ನು ಸಾಗಿಸುತ್ತಿದ್ದವರ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ.



