Connect with us

Dvgsuddi Kannada | online news portal | Kannada news online

ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ 44.53 ಕೋಟಿ ಮೌಲ್ಯದ ಚರ, ಸ್ಥಿರಾಸ್ತಿ ಒಡತಿ

IMG 20240413 063358

ದಾವಣಗೆರೆ

ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ 44.53 ಕೋಟಿ ಮೌಲ್ಯದ ಚರ, ಸ್ಥಿರಾಸ್ತಿ ಒಡತಿ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಒಟ್ಟು 44.53 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಒಡತಿಯಾಗಿದ್ದಾರೆ. ಇದಲ್ಲದೆ, 97.28 ಲಕ್ಷ ಸಾಲ ಹೊಂದಿದ್ದೇನೆ ಎಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಪತ್ನಿವಾಗಿರುವ ಡಾ.ಪ್ರಭಾ ಅವರ ಬಳಿ 67,566 ನಗದು, ವಿವಿಧ ಬ್ಯಾಂಕ್‌ಗಳಲ್ಲಿ 13,76,105 ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್‌ ಇತರೆಡೆ 2,65,20,500 ಬಂಡವಾಳ ಹೂಡಿಕೆ ಮಾಡಿದ್ದಾರೆ.

ಒಟ್ಟು 1.80 ಕೋಟಿ ಮೌಲ್ಯದ 3189.528 ಗ್ರಾಂ ಚಿನ್ನಾಭರಣ, 5.976 ಗ್ರಾಂ ಇತರೇ ಆಭರಣಗಳಿವೆ. ಬೆಳ್ಳಿ ಆಭರಣಗಳು ಯಾವುದೂ ಇಲ್ಲ. 10,23,009 ಮೌಲ್ಯದ ಇತರೆ ಆಸ್ತಿ ಡಾ.ಪ್ರಭಾರ ಹೆಸರಿಗೆ ಇವೆ. 1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ, 16.1 ಲಕ್ಷ ಮೌಲ್ಯದ 11,050 ಚದರಡಿ ಕೃಷಿಯೇತರ ಭೂಮಿ ಒಡತಿ. 34484 ಚದರಡಿ ಮನೆ ಜೊತೆಗೆ 2500 ಚದರ ಅಡಿ ಬಿಲ್ಡ್ ಏರಿಯಾ ಡಾ.ಪ್ರಭಾ ಅವರ ಹೆಸರಿನಲ್ಲಿದೆ.

ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ತಮಗೆ 2018-19ರಲ್ಲಿ 6,05,320, 2019-20ರಲ್ಲಿ 6,48,080, 2020-21ರಲ್ಲಿ 7,18,300, 2021-22ರಲ್ಲಿ 7,84,740, 2022-23ರಲ್ಲಿ 8,40,600 ಆಸ್ತಿ ದೊರೆತಿದೆ. ಒಟ್ಟು 44,53,14,286 ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಇದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top