ದಾವಣಗೆರೆ: ಇ-ಪ್ರಾಪರ್ಟಿ ಮಾಡಿಕೊಡಲು 3. ಸಾವಿರ ಲಂಚ ಪಡೆಯುವಾಗ ಸರ್ವೇಯರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಹರಳಹಳ್ಳಿಯ ದೇವೇಂದ್ರ ಗೌಡ ಎಂಬುವವರು, ಹಿನ್ನಾಳಿಯ ಎಡಿಎಲ್ ಕಚೇರಿಯಲ್ಲಿ ಇ-ಪ್ರಾಪರ್ಟಿ ಮಾಡಿ ಕೊಡಿ ಎಂದು ಸರ್ವೇಯರ್ ಆಗಿರುವ ಉದಯ್ ಚೌಧರಿ ಬಳಿ ಬಂದಿದ್ದಾರೆ. ಈತ ಕೆಲಸ ಮಾಡಿಕೊಡಲು ಮೂರು ಸಾವಿರ ಲಂಚ ಕೇಳಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಲೋಕಾಯುಕ್ತರಿಗೆ ಲಭಿಸಿದೆ. ಆದರೆ ಲಂಚ ಪಡೆಯುವಾಗಲೇ ಬಲೆಗೆ ಬೀಳಿಸಿದ್ದಾರೆ.
ಉದಯ್ ಚೌಧರಿ, ದಾವಣಗೆರೆ ಜಿಲ್ಲೆಯ ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಲಂಚ ಪಡೆಯುವ ಪ್ಲಾನ್ ಹಾಕಿಕೊಂಡಿದ್ದ. ಈ ವೇಳೆ, ಖಚಿತ ಮಾಹಿತಿ ಹೊಂದಿದ್ದ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಷ್ಟ್ರಪತಿ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಎಡಿಎಲ್ ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು.



