ದಾವಣಗೆರೆ: ಖಾಸಗಿ ಶಾಲೆಗೆ ಪರವಾನಗಿ ನೀಡಲು 15 ಸಾವಿರ ಲಂಚ ಪಡೆಯುವಾಗ ಹರಿಹರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹರಿಹರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ರಘುನಾಥ್ ಎಂಬುವವರಿಂದ 15 ಸಾವಿರ ಲಂಚ ಪಡೆಯುತ್ತಿದ್ದಾಗ ಬಿಇಒ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಸಿದ್ದಪ್ಪ ಅವರನ್ನು ಬಂಧಿಸಿದೆ.
ಹರಿಹರ ನಗರದ ವಿದ್ಯಾವಾಹಿನಿ ಶಾಲೆಯ ಮುಖ್ಯಸ್ಥರಾಗಿದ್ದ ರಘುನಾಥ್ ಶಾಲೆಯ ನವೀಕರಣಕ್ಕಾಗಿ ಅನುಮತಿ ಕೇಳಿದ್ದರು. ಸಿ ಬಿ ಎಸ್ ಸಿ ಶಾಲೆಯ ಪರವಾನಿಗಿ ನೀಡಲು ಬಿಇಒ ಸಿದ್ದಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ರಘುನಾಥ್ ಅವರಿಂದ ಲಂಚದ ಹಣ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.



