ದಾವಣಗೆರೆ: ದಾವಣಗೆರೆಯ ಇಬ್ಬರು ಅಧಿಕಾರಿಗಳ ಕಚೇರಿ, ಆಸ್ತಿ-ಪಾಸ್ತಿ ಮೇಲೆ ಲೋಕಾಯುಕ್ತ (lokayukta karnataka) ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಏಕ ಕಾಲಕ್ಕೆ ದಾಳಿ (Lokayukta Raid) ನಡೆಸಿದ್ದಾರೆ.
ಕೆಆರ್ ಐಡಿಎಲ್ ಎಇಇ ಜಗದೀಶ್ ನಾಯ್ಕ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್.ಡಿ.ಎ. ಬಿ.ಎಸ್ . ನಡುವಿನಮನೆ ಮೇಲೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ತಂಡ ದಾಳಿ ನಡೆದಿದೆ. ಅಕ್ರಮ ಆಸ್ತಿ-ಪಾಸ್ತಿ ಶೋಧ ನಡೆಸಿದ್ದಾರೆ.
ದಾವಣಗೆರೆ ನಗರದ ಸರಸ್ವತಿ ಬಡಾವಣೆಯಲ್ಲಿರುವ ಆಹಾರ ಇಲಾಖೆಯ ಎಸ್.ಡಿ.ಎ. ಮನೆಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಸರಳ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಎಸ್ ಪಿ ಕೌಲಾಪುರೆ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ದಾವಣಗೆರೆಯಲ್ಲಿ ಎಪಿಎಂಸಿ ಬಳಿ ಇರುವ ಆಹಾರ ಇಲಾಖೆಯ ಉಗ್ರಾಣದ ಕಚೇರಿ ಮೇಲೆ ಸಹ ದಾಳಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಭಾಗದ ಕೆ ಆರ್ ಐ ಡಿ ಎಲ್ ಎಇಇ ಜಗದೀಶ್ ನಾಯ್ಕ್ ಕಚೇರಿ ಮತ್ತು ಶಿವಮೊಗ್ಗ ಹಾಗೂ ಶಿವಮೊಗ್ಗ ಜಿಲ್ಲೆಯ ಮೂರು ಕಡೆಗಳಲ್ಲಿ ಜಗದೀಶ್ ನಾಯ್ಕ್ ಗೆ ಸೇರಿದ ಮೂರು ಮನೆಗಳ ಮೇಲೆ ದಾಳಿ ನಡೆದಿದೆ. ವಿಚಾರದಲ್ಲಿ ಮುಂದುವರೆದಿದೆ.