ದಾವಣಗೆರೆ: ಚೆಕ್‌ಬೌನ್ಸ್ ಪ್ರಕರಣವೊಂದರಲ್ಲಿ ತಮಿಳುನಾಡು ಮೂಲದ ವ್ಯಕ್ತಿಗೆ ವಾರೆಂಟ್ ಜಾರಿ ಮಾಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಜಿಲ್ಲೆಯ ಹೊನ್ನಾಳಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಭರತ್, ಅವರ ಸಬಂಧಿ ಸುರೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಜಿಲ್ಲೆಯ ಗುಡ್ಡದಮಾದಾಪುರ ಗ್ರಾಮದ ಅವಿನಾಶ್ ಎಂಬ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತರ ದಾಳಿ ಮಾಡಿದ್ದಾರೆ. 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 15 ಸಾವಿರವನ್ನು ಸುರೇಶ್ ಅವರ ಮೂಲಕ ಹೊನ್ನಾಳಿ ಬಸ್ ನಿಲ್ದಾಣದಲ್ಲಿ ಪಡೆಯುತ್ತಿರುವ ವೇಳೆ ಬಂಧಿಸಲಾಗಿದೆ. ಲೋಕಾಯುಕ್ತ ಬಲೆಗೆ ಬಿದ್ದ ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಭರತ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರಾಷ್ಟ್ರಪತಿ ಎಚ್.ಎಸ್. ಪಿಐ ಆಂಜನೇಯ ಎನ್.ಎಚ್ ಹಾಗೂ ಸಿಬ್ಬಂದಿ ದಾಳಿ ನಡೆದಿದೆ.



