ದಾವಣಗೆರೆ: ನಗರದಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ದೊಡ್ಡ ಬೇಟೆಯಾಡಿದ್ದು, ಕಂದಾಯದ ಜಮೀನಿನನ್ನು ಸೈಟ್ ಆಗಿ ಪರಿವರ್ತಿಸಲು 3 ಲಕ್ಷಕ್ಕೆ ಲಂಚದ ಹಣಕ್ಕೆ ಬೇಡಿಕೆ ಇಟ್ಟು 2 ಲಕ್ಷ ಪಡೆಯುವಾಗ ಇಬ್ಬರು ಅಧಿಕಾರಿಗಳು ಇಂದು (ಫೆ.17) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರ ಮತ್ತು ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕರ ಕಚೇರಿಯ ಟೌನ್ ಫ್ಲಾನಿಂಗ್ ಅಫೀಸರ್ ಭರತಕುಮಾರ್, ಸಹಾಯಕ ನಿರ್ದೇಶಕ ಮಂಜುನಾಥ ಬಲೆಗೆ ಬಿದ್ದ ಅಧಿಕಾರಿಗಳು. ನಗರದ ಶ್ರೀನಿವಾಸ ಮತ್ತು ಸಂತೋಷ ಅವರು ತಮ್ಮ ಜಮೀನು ಸೈಟ್ ಗಳಾಗಿ ಪರಿವರ್ತಿಸಲು ತಾಂತ್ರಿಕ ಮತ್ತು ನಕ್ಷೆ ರಚಿಸಲು 3 ಲಕ್ಷ ರೂ ಲಂಚಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಅರೋಪಿ ಭರತ ಕುಮಾರ್ 1 ಲಕ್ಷ ಹಣ ಪಡೆದಿದ್ದಾರೆ. ಉಳಿದ 2 ಲಕ್ಷ ರೂ ಹಣವನ್ನು ನಗರ ಮತ್ತು ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳಾದ ಭರತಕುಮಾರ್ ಮತ್ತು ಮಂಜುನಾಥ ಅವರನ್ನು ಲಂಚದ ಹಣ ಪಡೆಯುವಾಗ ಲೋಕಾಯುಕ್ತರು ಬಲೆಗೆ ಬೀಳಿಸಿದ್ದಾರೆ.
ಈ ವೇಳೆ ಲಂಚದ ಹಣ ವಶಕ್ಕೆ ಪಡೆದು ಅಧಿಕಾರಿ ಕಚೇರಿ ಮತ್ತು ಮನೆ ತಪಾಸಣೆ ನಡೆಸಿದ್ದಾರೆ.ಅಲ್ಲದೇ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಎಚ್.ಎಸ್ ರಾಷ್ಟ್ರಪತಿ ಮತ್ತು ಆಂಜನೇಯ ಅವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಚಂದ್ರಶೇಖರ್, ಆಂಜನೇಯ, ಅಶಾ, ಧನರಾಜ್,ಲಿಂಗೇಶ್, ಬಸವರಾಜ, ಮುಜೀಬ್, ಜ಼ಷೀಂದಾಖಾನಂ, ವಿನಾಯಕ, ಕೃಷ್ಣನಾಯ್ಕ್, ಮೋಹನ್ ಭಾಗವಹಿಸಿದ್ದರು.