ದಾವಣಗೆರೆ: ಅಬಕಾರಿ ಪರವಾನಗಿ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಅಬಕಾರಿ ಅಧಿಕಾರಿಗಳ ಅಮಾನತು ಆದೇಶ ತಡೆ ಅರ್ಜಿ ವಜಾಗೊಂಡಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಅರ್ಜಿ ವಜಾ ಮಾಡಿದೆ.
ಸಿಎಲ್- 7 ಬಾರ್‌ಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು 60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸೆಪ್ಟೆಂಬರ್ 13ರಂದು ಲೋಕಾಯುಕ್ತಕ್ಕೆ ದೂರು ನೀಡಿ, ಸೆ. 14ರಂದು ಮುಂಗಡವಾಗಿ 3 ಲಕ್ಷ ಲಂಚ ನೀಡುವಾಗ ಲೋಕಾಯುಕ್ತ ದಾಳಿ ನಡೆಸಿತ್ತು. ಈ ವೇಳೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ಆರ್.ಎಸ್. ಸ್ವಪ್ನಾ, ಹರಿಹರ ಇನ್‌ಸ್ಪೆಕ್ಟರ್ ಶೀಲಾ, ಎಫ್‌ಡಿಎ ಅಶೋಕ್, ಇಲಾಖೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ರವಿಕುಮಾರ್ ಮರಿಗೌಡರ್ ಸಿಕ್ಕಿ ಬಿದ್ದರು.
ಆರ್.ಎಸ್. ಸ್ವಪ್ನಾ, ಶೀಲಾ, ಅಶೋಕ್, ಶೈಲಶ್ರೀ ಅವರನ್ನು ಬಂಧಿಸಿದ್ದರು. ಮತ್ತೊಬ್ಬ ಆರೋಪಿ, ಇಲಾಖೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ರವಿಕುಮಾರ್ ಮರಿಗೌಡರ್ ತಲೆ ಮರೆಸಿಕೊಂಡಿದ್ದರು. ನಂತರ ಎಲ್ಲರೂ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಈ ಪ್ರಕರಣದ ಆರೋಪಿಗಳನ್ನು ಇಲಾಖೆ ಅಮಾನತು ಮಾಡಿತ್ತು. ಆರೋಪಿಗಳು ಅಮಾನತು ತಡೆಯಾಜ್ಞೆ ತರಬೇಕೆಂದು ಕೆಎಟಿ ಅರ್ಜಿ ಸಲ್ಲಿಸಿದ್ದರು. ಶೀಲಾ, ರವಿಕುಮಾರ್ ಮರಿಗೌಡರ್, ಸ್ವಪ್ನಾ ಮತ್ತೆ ಹುದ್ದೆಗೆ ಹಾಜರಾಗಿದ್ದರು.