ದಾವಣಗೆರೆ: ಲೋಕ ಅದಾಲತ್‌ನಲ್ಲಿ (look adalat) ಜಿಲ್ಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 24 ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ.
ವಿವಿಧ ಕಾರಣಗಳನ್ನು ನೀಡಿ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹರಿಹರ 3, ಚನ್ನಗಿರಿ 1 ಸೇರಿದಂತೆ ಒಟ್ಟು 24 ದಂಪತಿಗಳು ತಮ್ಮ ವೈಮನಸ್ಸುಗಳನ್ನು ಮರೆತು ಒಂದಾಗಿ ಸಹಬಾಳ್ವೆ ನಡೆಸಲು ಸಮ್ಮತಿ ಸೂಚಿಸಿದ್ದಾರೆ.
ಜಿಲ್ಲೆಯ ನ್ಯಾಯಾಲಯ ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಟ್ಟು 5,684 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. 10.37 ಕೋಟಿ ರೂ.ಗೂ ಅಧಿಕ ಮೊತ್ತದ ಪರಿಹಾರವನ್ನು ನ್ಯಾಯಾಧೀಶರು ಇತ್ಯರ್ಥಪಡಿಸಿದರು.
7,19,455 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಮುಕ್ತಾಯಗೊಳಿಸಿ, 61.46 ಕೋಟಿ ರೂ ಮೊತ್ತವನ್ನು ಸರ್ಕಾರಕ್ಕೆ ರಾಜೀ ಸಂಧಾನದ ಮೂಲಕ ಭರಿಸಿಕೊಡಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದ್ದಾರೆ.
ಯಾವ ಪ್ರಕರಣ ಇತ್ಯರ್ಥ..?
- 46 ಅಪರಾಧಿಕ ಪ್ರಕರಣ
- 142 ಚೆಕ್ ಅಮಾನ್ಯ
- 29 ಬ್ಯಾಂಕ್ ವಸೂಲಾತಿ
- 15 ಇತರೆ ಹಣ ವಸೂಲಾತಿ
- 55 ಅಪಘಾತ ಪರಿಹಾರ
- 88 ವಿದ್ಯುತ್ ಕಳ್ಳತನ
- 35 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ
- 54 ಮೋಟಾರು ಪರಿಹಾರ
- 65 ಇತರೆ ಜಾರಿ ಅರ್ಜಿಗಳು
- ವಿವಿಧ ಕಾರಣಕ್ಕೆ ದಾಖಲಿಸಿದ್ದ 60 ದಾವೆಗಳು
- ಜೀವನಾಂಶ ಕೋರಿದ್ದ 47 ಅರ್ಜಿಗಳು



