Connect with us

Dvgsuddi Kannada | online news portal | Kannada news online

ದಾವಣಗೆರೆ: ನಕಲಿ ಮದ್ಯ ಮಾರಾಟ, ಸಂಗ್ರಹ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲು ಈ ನಂಬರ್ ಗೆ ಸಂಪರ್ಕಿಸಿ

FB IMG 1678758158822

ದಾವಣಗೆರೆ

ದಾವಣಗೆರೆ: ನಕಲಿ ಮದ್ಯ ಮಾರಾಟ, ಸಂಗ್ರಹ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲು ಈ ನಂಬರ್ ಗೆ ಸಂಪರ್ಕಿಸಿ

ದಾವಣಗೆರೆ; 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಏಪ್ರಿಲ್ ಮೇ ತಿಂಗಳಲ್ಲಿ ನಡೆಯಲಿದ್ದು, ಚುನಾವಣಾಸಮಯದಲ್ಲಿ ಮತದಾರರನ್ನು ಸೆಳೆಯಲು ಅಥವಾ ಓಲೈಸುವ ಸಲುವಾಗಿ ಕಳಪೆ ಗುಣಮಟ್ಟದ ನಕಲಿ ಮದ್ಯ ಮತ್ತು ಕಳ್ಳಬಟ್ಟಿ, ಸಾರಾಯಿ ತಯಾರಿಕೆ / ಸಾಗಣಿಕೆ/ ಶೇಖರಣೆ ಮಾಡಿ ಸಾರ್ವಜನಿಕರಿಗೆ ವಿತರಿಸುವ ಸಂಭವವಿದ್ದು,ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಅನಧಿಕೃತ ಸ್ಥಳಗಳಲ್ಲಿ ನಾಲಿ ಮದ್ಯ ಮಾರಾಟ ಮಾಡುವವರ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಅಪರಾಧ ದಾಖಲಿಸಲಾಗುತ್ತದೆ.

ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ವ್ಯಾಪ್ತಿಯ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ
ನೀಡಬೇಕೆಂದು ಸಾರ್ವಜನಿಕರಿಗೆ ತಿಳಿಸಲಾಗಿದೆ. ಅಲ್ಲದೇ ಇಂತಹ ಕೃತ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಅಬಕಾರಿ
ಇಲಾಖೆಯ ಟೋಲ್ ಫ್ರೀ ನಂ. 18004250379 ಗೆ ಮಾಹಿತಿ ನೀಡಬೇಕೆಂದು ಹಾಗೂ ಇಲಾಖೆಯ ಜಿಲ್ಲಾ
ಉಪ ವಿಭಾಗ, ವಲಯ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್‌ ಸ್ಥಿರ ದೂರವಾಣಿ ಹಾಗೂ ಅಧಿಕಾರಿಗಳ ಮೊಬೈಲ್ ನಂಬರಿಗೆ ದೂರು ನೀಡಬಹುದು.

ಮಾಹಿತಿದಾರರ ಹೆಸರು ಇತ್ಯಾದಿ ವಿವರಗಳನ್ನು ಗೌಪ್ಯವಾಗಿಡಲಾಗುವುದು.
ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಂಟ್ರೋಲ್ ರೂಮ್ವ ದೂರವಾಣಿ ಸಂಖ್ಯೆ : 08192-230921, ಮೊ:‌9449597061, 9449597063, ಜಿಲ್ಲಾ ಅಬಕಾರಿ ಉಪ ಅಧೀಕ್ಷಕರ ಕಂಟ್ರೋಲ್ ರೂಂ ದೂ:
08192-225042, 9449597064, 9449597065, ಹೊನ್ನಾಳಿ ಅಬಕಾರಿ ಉಪ ಅಧೀಕ್ಷಕರ ಕಂಟ್ರೋಲ್ 08168-295202, 9449597066, 9449597067, ದಾವಣಗೆರೆ ವಲಯ ನಂ-1 ಅಬಕಾರಿ
ನಿರೀಕ್ಷಕರ ದೂ.ಸಂ: 08192-224177, ದಾವಣಗೆರೆ ವಲಯ ನ-2 ಅಬಕಾರಿ ನಿರೀಕ್ಷಕರ ದೂ. ಸ 08192-221150, ಪರಿಷರ ವಲಯ ಅಬಕಾರಿ ನಿರೀಕ್ಷಕರ ದೂ.ಸ೦: 08192-242166, ಚನ್ನಗಿರಿ
ವಲಯ ಅಬಕಾರಿ ನಿರೀಕ್ಷಕರದೂ. 08169-295445, ಹೊನ್ನಾಳಿ ವಲಯ ಅಬಕಾರಿ ನಿರೀಕ್ಷಕರ ದೂ.ಸಂ: 08183-195315 ಗೆ ಕರೆಮಾಡಿ ದೂರು ನೀಡಬಹುದು. ಎಂದು ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿ ಬಿ. ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top