ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಿಧಾನಸಭಾ ಚುನಾವಣಾ ನಿಮಿತ್ತ ಅಬಕಾರಿ ಉಪ ಆಯುಕ್ತರು ಮಾರ್ಗದರ್ಶನದಲ್ಲಿ ಹೊನ್ನಾಳಿ ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ಮತ್ತು ಸಿಬ್ಬಂದಿಗಳು ಮಾರ್ಚ 4ರಿಂದ ಏಪ್ರಿಲ್ 5ರವರೆಗೆ ವಿವಿದೆಡೆ ದಾಳಿ ನಡೆಸಿ 15(ಎ)ಅಡಿಯಲ್ಲಿ 12, ಬಿ.ಎಲ್.ಸಿ.ಅಡಿಯಲ್ಲಿ 3, ಹಾಗೂ ಘೋರ ಪ್ರಕರಣದಡಿಯಲ್ಲಿ 8 ಹೀಗೆ ಒಟ್ಟು 23 ಪ್ರಕರಣಗಳ ಅಡಿಯಲ್ಲಿ 140.91 ಲೀಟರ್ ಮದ್ಯ ಹಾಗೂ 18.6 ಲೀಟರ್ ಬೀಯರ್ ಹಾಗೂ 4 ದ್ವಿಚಕ್ರ ವಾಹಗಳನ್ನು
ಜಪ್ತಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ರೂ.1,76,035 ಎಂದು ಅಂದಾಜಿಸಲಾಗಿದೆ ಎಂದು ಹೊನ್ನಾಳಿ ಉಪ ಅಧೀಕ್ಷಕರಾದಎಸ್.ಆರ್.ಮುರುಡೇಶ್ ತಿಳಿಸಿದ್ದಾರೆ.ಈ ಎಲ್ಲಾ ಪ್ರಕಣರಗಳ ದಾಳಿಯಲ್ಲಿ ಅಬಕಾರಿ ನಿರೀಕ್ಷಕರು ಬಸಲಿಂಗಪ್ಪ ಚಿಮ್ಮಲಗಿ, ಉಪನಿರೀಕ್ಷಕರಾದ ಶ್ರೀಧರ ಲಡಗಿ, ಅಬಕಾರಿ ಪೇದೆಗಳಾದ ಜಿ.ಬಿ.ರಮೇಶ್‌ಕುಮಾರ್, ಚಿದಾನ೦ದಮೂರ್ತಿ, ಖಂಡೋಜಿರಾವ್,ಡಿ.ಮಂಜಪ್ಪ, ವಾಹನ ಚಾಲಕಿ ಶೈಲಾ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.