ದಾವಣಗೆರೆ: ನಗರದ ಕೆ.ಆರ್. ರಸ್ತೆಯಲ್ಲಿರುವ ಎಲ್ ಐಸಿ ಕಚೇರಿಗೆ ತಡ ರಾತ್ರಿ ಬೆಂಕಿ ಬಿದಿದ್ದು, ಕಚೇರಿಯಲ್ಲಿದ್ದ ಮಹತ್ವದ ದಾಖಲೆಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ.
ತಡರಾತ್ರಿ ಎಲ್ ಐಸಿ ಕಚೇರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಇಡೀ ಕಚೇರಿಯನ್ನು ವ್ಯಾಪಿಸಿದೆ. ಈ ಬೆಂಕಿ ಜ್ವಾಲಾಮುಖಿಗೆ ಮಹತ್ವದ ದಾಖಲೆ, ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಹೊತ್ತಿ ಉರಿದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಕೂಡಲೇ ಅಗ್ನಿಶಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



