ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಕಾನೂನು ತರಬೇತಿ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಇಲಾಖೆಯ ವೆಬ್ಸೈಟ್: www.tw.kar.nic.in ನಲ್ಲಿ ಅಕ್ಟೋಬರ್ 7 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ಮೂಲ ಪ್ರತಿಯೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಸಂಖ್ಯೆ:45, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ. ಷರತ್ತುಗಳು: ಕಾನೂನು ಪದವಿ ಪಡೆದು 2 ವರ್ಷ ಮೀರಿರಬಾರದು, ತರಬೇತಿಯನ್ನು ದಾವಣಗೆರೆಯಲ್ಲೇ ಪಡೆಯಬೇಕು. ಅರ್ಜಿ ಸಲ್ಲಿಕೆ ಕೊನೆ ದಿನಾಂಕಕ್ಕೆ 40 ವರ್ಷ ಮೀರಿರಬಾರದ, ಆಯ್ಕೆಯಾದವರಿಗೆ ತರಬೇತಿ ಅವಧಿ 2 ವರ್ಷಗಳಾಗಿದೆ. ಆಯ್ಕೆಯಾದವರಿಗೆ ಮಾಸಿಕ 10 ಸಾವಿರಗಳಂತೆ ಶಿಷ್ಯ ವೇತನ ನೀಡಲಾಗುವುದು.



