ದಾವಣಗೆರೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದಲ್ಲಿ ಫೆ.20 ರಂದು ಶ್ರೀಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ.
ಫೆ.16 ರಂದು ಉತ್ಸವ ಮೂರ್ತಿಗೆ ಕಂಕಣ ಧಾರಣೆ, ಫೆ.17 ರಂದು ಉತ್ಸವ ಮೂರ್ತಿಯು ಹೊರವುದು. ಫೆ.18 ರಂದು ರಥಕ್ಕೆ ಕಳಸ ಇಡುವ ಕಾರ್ಯಕ್ರಮ ಮತ್ತು ಮಹಾಮಂಗಳಾರತಿ, ಫೆ.19 ರಂದು ಉತ್ಸವ ಮೂರ್ತಿ ಹೊರಡುವುದು. ಫೆ.20 ರಂದು ಸಂ. 4 ಗಂಟೆಗೆ ಶ್ರೀಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀಬಸವೇಶ್ವರಸ್ವಾಮಿ ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.