ದಾವಣಗೆರೆ: ಕುರುಬರ ಸಮಾಜದ ಮೇಲಿನ ದಬ್ಬಾಳಿಕೆ, ಸಮುದಾಯದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಪ್ಪಿಸಲು ಎಸ್ ಟಿ ಮೀಸಲಾತಿ ಹೋರಾಟ ನಡೆಸಲಾಗುತ್ತಿದೆ ಎಂದು ಕಾಗಿನೆಲೆಯ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹೋರಾಟ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಹೆಚ್. ಎಂ, ರೇವಣ್ಣ ಹಿರೋ ಮಾಡುವುದಕ್ಕೆ ಅಲ್ಲ. ಈ ಹೋರಾಟ ಕುರುಬರನ್ನು ಹಿರೋ ಮಾಡುವುದಕ್ಕೆ ಎಂದು ಕರೆ ನೀಡಿದರು.
ಎಸ್ಟಿ ಮೀಸಲಾತಿ ಹೋರಾಟ ಯೋಚನೆ ಮಾಡಿಯೇ ಕೈ ಹಾಕಿದ್ದೇವೆ. ನಾವು ಮೊದಲು ಹೋಗಿದ್ದು ಸಿದ್ದರಾಮಯ್ಯ ಅವರ ಮನೆಗೆ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಪುನರುಚ್ಚಾರಿಸಿದರು. ಸಿದ್ದರಾಮಯ್ಯ ಒಪ್ಪಿಕೊಂಡ ಮೇಲೆ ನಾವು ಈಶ್ವರಪ್ಪನ ಮನೆಗೆ ಹೋಗಿದದ್ದು, ಇಲದು ಯಾವ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಅಲ್ಲ ಎಂದರು.

ನಾನು 300 ಕಿ ಮೀ ನಡೆಯಲು ಸಿದ್ಧನಿದ್ದು, ಈಗಾಗಲೇ ತಯಾರಿ ನಡೆಸಿದ್ದೇನೆ .ನೀವು ನನ್ನ ಜೊತೆ ಹೆಜ್ಜೆ ಹಾಕಬೇಕು ಎಂದು ಭಕ್ತರಿಗೆ ಕರೆ ನೀಡಿದರು.ಪಾದಯಾತ್ರೆಯಲ್ಲಿ ಕಂಬಳಿಯನ್ನು ಕಡ್ಡಾಯ ವಾಗಿ ಹಾಕಿಕೊಂಡು ಬರಬೇಕು. ಕಂಬಳಿ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸಲಿದೆ ಎಂದರು.



